ADVERTISEMENT

’ಭವಿಷ್ಯದಲ್ಲಿ ಮಹಿಳಾ ದಲೈಲಾಮಾ ಸಾಧ್ಯತೆ‘

ಟಿಬೆಟ್‌ನ ಧಾರ್ಮಿಕ ಗುರು ದಲೈಲಾಮಾ ಹೇಳಿಕೆ

ಪಿಟಿಐ
Published 14 ಡಿಸೆಂಬರ್ 2018, 16:48 IST
Last Updated 14 ಡಿಸೆಂಬರ್ 2018, 16:48 IST
ದಲೈಲಾಮಾ
ದಲೈಲಾಮಾ   

ಮುಂಬೈ: ‘ಬೌದ್ಧ ಧರ್ಮವೂ ಹೆಚ್ಚು ಪ್ರಗತಿಪರವಾಗಿದ್ದು, ಎಲ್ಲ ಲಿಂಗದವರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಭವಿಷ್ಯದಲ್ಲಿ ‘ಮಹಿಳಾ ದಲೈಲಾಮಾ’ ನೇಮಕ ಆಗಬಹುದು’ ಎಂದು ಟಿಬೆಟ್‌ನ ಧಾರ್ಮಿಕ ಗುರು ದಲೈಲಾಮಾ ತಿಳಿಸಿದರು.

ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಸಭಿಕರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ವಿಷಯ ತಿಳಿಸಿದ್ದಾರೆ.

‘15 ವರ್ಷದ ಹಿಂದೆ ಫ್ರೆಂಚ್‌ ಮಹಿಳಾ ನಿಯತಕಾಲಿಕೆಯ ಸಂಪಾದಕರೊಬ್ಬರು ನನ್ನನ್ನು ಸಂದರ್ಶಿಸಲು ಬಂದಿದ್ದರು. ಭವಿಷ್ಯದಲ್ಲಿ ಮಹಿಳಾ ದಲೈಲಾಮಾ ಆಗುವ ಸಾಧ್ಯತೆ ಇದೆಯೇ ಎಂದು ನನ್ನನ್ನು ಪ‍್ರಶ್ನಿಸಿದರು. ಅದಕ್ಕೆ ‘ಹೌದು’ ಎಂದು ಉತ್ತರಿಸಿದೆ. ಭವಿಷ್ಯದಲ್ಲಿ ಬೌದ್ಧಧರ್ಮದ ಮಹಿಳಾ ಘಟಕವೂ ಸಕ್ರಿಯವಾದರೆ ಇದು ಸಾಧ್ಯ. ಬೌದ್ಧ ಧರ್ಮವೂ ಹೆಚ್ಚು ಪ್ರಗತಿಪರವಾಗಿದೆ’ ಎಂದು ಲಾಮಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.