ADVERTISEMENT

ಬಿಹಾರ: ಬಿಜೆಪಿ–ಜೆಡಿಯು ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಸ್ಫೋಟ?

ಶಾಸಕರ ಕಡಿಮೆ ಹಾಜರಾತಿ– ವಿಧಾನಸಭೆ ಕಲಾಪ ಮುಂದೂಡಿಕೆ

ಪಿಟಿಐ
Published 28 ಜೂನ್ 2022, 14:23 IST
Last Updated 28 ಜೂನ್ 2022, 14:23 IST
ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದು ಆಗ್ರಹಿಸಿ ಆರ್‌ಜೆಡಿ ನಾಯಕಿ ರಾಬ್ಡಿದೇವಿ ಹಾಗೂ ಪಕ್ಷದ ಮುಖಂಡರು ಪಟ್ನಾದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟಿಸಿದರು –ಪಿಟಿಐ ಚಿತ್ರ
ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದು ಆಗ್ರಹಿಸಿ ಆರ್‌ಜೆಡಿ ನಾಯಕಿ ರಾಬ್ಡಿದೇವಿ ಹಾಗೂ ಪಕ್ಷದ ಮುಖಂಡರು ಪಟ್ನಾದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟಿಸಿದರು –ಪಿಟಿಐ ಚಿತ್ರ   

ಪಟ್ನಾ: ಶಾಸಕರ ಹಾಜರಾತಿ ಕಡಿಮೆ ಇದೆ ಎಂಬ ಕಾರಣ ನೀಡಿ ಬಿಹಾರ ವಿಧಾನಸಭೆಯ ಕಲಾಪವನ್ನು ಮಂಗಳವಾರ ಮುಂದೂಡಲಾಯಿತು. ಈ ಬೆಳವಣಿಗೆ, ಆಡಳಿತಾರೂಢ ಪಕ್ಷವಾದ ಬಿಜೆಪಿಯನ್ನು ಕೆರಳಿಸಿತು.

ಈ ವಿದ್ಯಮಾನವು ಆಡಳಿತಾರೂಢ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಯು ನಡುವಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲದೇ, ಅಗ್ನಿಪಥ ಯೋಜನೆಯನ್ನು ಮುಂದಿಟ್ಟುಕೊಂಡು ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷಗಳು ವಿಧಾನಸಭೆ ಕಲಾಪಕ್ಕೆ ಪದೇಪದೇ ಅಡ್ಡಿಯನ್ನುಂಟು ಮಾಡುತ್ತಿವೆ. ವಿರೋಧ ಪಕ್ಷಗಳ ಈ ನಡೆಗೆ ಆಡಳಿತಾರೂಢ ಪಕ್ಷವಾದ ಜೆಡಿಯುನ ಬೆಂಬಲ ಇದೆ ಎಂಬುದಾಗಿ ಅರ್ಥೈಸಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಆದರೆ, ಕಲಾಪಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವ ವಿರೋಧ ಪಕ್ಷಗಳಿಗೆ ಪಕ್ಷವು ಪ್ರಚೋದನೆ ನೀಡುತ್ತಿದೆ ಎಂಬ ಆರೋಪಗಳನ್ನು ಜೆಡಿಯು ನಾಯಕರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.