ADVERTISEMENT

ಚೆನ್ನೈ | ಆಮ್ಲಜನಕ ಪೂರೈಕೆಯಲ್ಲಿ ಕೊರತೆ: ಆಸ್ಪತ್ರೆಯಲ್ಲಿ 13 ರೋಗಿಗಳ ಸಾವು

ಸಂಬಂಧಿಕರ ಆರೋಪ

ಪಿಟಿಐ
Published 5 ಮೇ 2021, 14:38 IST
Last Updated 5 ಮೇ 2021, 14:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ಇಲ್ಲಿಗೆ ಸಮೀಪದ ಚೆಂಗಲಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳೊಳಗೆ ಹದಿಮೂರು ರೋಗಿಗಳು ಮೃತಪಟ್ಟಿದ್ದು, ಆಮ್ಲಜನಕದ ಸರಬರಾಜಿನಲ್ಲಿ ವ್ಯತ್ಯಯ ಆಗಿರುವುದೇ ಇವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

ಚೆಂಗಲಪಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.

‘ಮೃತಪಟ್ಟವರು 40 ರಿಂದ 85 ವರ್ಷದೊಳಗಿನವರು. ನಾನು ರಾತ್ರಿ ಪೂರ್ತಿ ಸ್ಥಳದಲ್ಲಿದ್ದು ಮೇಲ್ವಿಚಾರಣೆ ನಡೆಸಿದ್ದೇನೆ. ಅವರೆಲ್ಲ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿಲ್ಲ.ಘಟನೆ ಸಂಬಂಧ, ವೈದ್ಯಕೀಯ ಶಿಕ್ಷಣ ನಿರ್ದೇಶಕರು ತನಿಖೆ ನಡೆಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಎ ಜಾನ್ ಲೂಯಿಸ್ ತಿಳಿಸಿದ್ದಾರೆ.

ADVERTISEMENT

‘ಮೃತರಲ್ಲಿ ಒಬ್ಬರಿಗೆ ಮಾತ್ರವೇ ಕೋವಿಡ್‌ ದೃಢಪಟ್ಟಿತ್ತು. ಉಳಿದವರ ವರದಿ ನೆಗೆಟಿವ್‌ ಬಂದಿತ್ತು. ಅವರೆಲ್ಲ ನ್ಯುಮೋನಿಯಾ ಮತ್ತು ಕೊಮೊರ್ಬಿಡಿಟಿ ಕಾಯಿಲೆಗೆ ತುತ್ತಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆಯ ಡೀನ್‌ ಡಾ. ಜೆ. ಮುತ್ತು ಕುಮಾರನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.