ADVERTISEMENT

ಪ್ರಧಾನಿ ಬಯಸಿದ್ದು ಇದನ್ನಲ್ಲ: ಕಿರಣ್‌ ಮಜುಮ್‌ದಾರ್‌ ಶಾ ಟ್ವೀಟ್‌ ವೈರಲ್‌ 

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 7:56 IST
Last Updated 23 ಮಾರ್ಚ್ 2020, 7:56 IST
   

ಬೆಂಗಳೂರು: ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವವೈದ್ಯಕೀಯ ರಂಗದ ಪರಿಶ್ರಮವನ್ನು ಪ್ರಶಂಸಿಸಲೆಂದು ಭಾನುವಾರ ಸಂಜೆ ನಾಗರಿಕರು ಚಪ್ಪಾಳೆ ತಟ್ಟುವ ನೆಪದಲ್ಲಿ ಗುಂಪುಗೂಡಿ ಸಂಭ್ರಮಿಸಿದ್ದನ್ನು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಮ್‌ದಾರ್‌ ಶಾ ಟೀಕಿಸಿದ್ದಾರೆ.

ರಸ್ತೆಯೊಂದರಲ್ಲಿ ಗುಂಪು ಗೂಡಿದ ಜನ ಚಪ್ಪಾಳೆ, ತಟ್ಟೆ ತಟ್ಟುತ್ತಾ, ಗಂಟೆ ಭಾರಿಸುತ್ತಾ ಸಂಭ್ರಮಿಸುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಿರಣ್‌ ಮಜುಮ್‌ದಾರ್‌ ಶಾ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಯಸಿದ್ದು ಇದನ್ನಲ್ಲ. ಸಾಮಾಜಿಕ ಅಂತರ ಅಂದರೆ ಏನೆಂದು ಈ ಜನರಿಗೆ ಗೊತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಸದ್ಯ ಈ ಟ್ವೀಟ್‌ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ

ADVERTISEMENT

ಕಿರಣ್‌ ಮಜುಮ್‌ದಾರ್‌ ಶಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ ಗುಜರಾತ್‌ನ ಅಹಮದಾಬಾದ್‌ ನಗರದ ಖಾದಿಯ ಎಂಬ ಪ್ರದೇಶದ್ದು ಎಂಬುದು ಗೊತ್ತಾಗಿದೆ.

ಕೊರೊನಾ ವೈರಸ್‌ ತಡೆಯುವ ನಿಟ್ಟಿನಲ್ಲಿ ಭಾನುವಾರ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದರು. ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅದೇ ದಿನ ಚಪ್ಪಾಳೆ ನೀಡಿ ಪ್ರಶಂಸಿಸಲು ಅವರು ತಿಳಿಸಿದ್ದರು.

ಅದರಂತೆ, ಚಪ್ಪಾಳೆ ತಟ್ಟುವ ನೆಪದಲ್ಲಿ ಕೆಲ ಮಂದಿ ಬೀದಿಯಲ್ಲಿ ಗುಂಪುಗೂಡಿದ್ದ ವಿಡಿಯೊ, ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.