ADVERTISEMENT

ಕೆಲಸದಲ್ಲಿ ವಿಫಲರಾದವರು ‘ಸಮಯ ಮಿತಿ’ಯನ್ನು ಬದಲಾಯಿಸುತ್ತಾರೆ: ಅಖಿಲೇಶ್‌

ಪಿಟಿಐ
Published 22 ಫೆಬ್ರುವರಿ 2025, 12:17 IST
Last Updated 22 ಫೆಬ್ರುವರಿ 2025, 12:17 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್    

ಲಖನೌ: ಉತ್ತರ ಪ್ರದೇಶದ ಆರ್ಥಿಕತೆಯನ್ನು 2029ರ ವೇಳೆಗೆ ಒಂದು ಟ್ರಿಲಿಯನ್‌ ಡಾಲರ್‌ಗೆ ತಲುಪಿಸುವ ಬಿಜೆಪಿ ಸರ್ಕಾರದ ಹೇಳಿಕೆಯನ್ನು ಟೀಕಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಯಾರು ತಮ್ಮ ಕೆಲಸದಲ್ಲಿ ವಿಫಲರಾಗುತ್ತಾರೋ ಅವರು ನಿಗದಿತ ಗುರಿಯ ‘ಸಮಯದ ಮಿತಿ’ಯನ್ನು ಬದಲಾಯಿಸುತ್ತಾರೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘2024ರ ವೇಳೆಗೆ ಉತ್ತರ ಪ್ರದೇಶದ ಆರ್ಥಿಕತೆಯನ್ನು ಒಂದು ಟ್ರಿಲಿಯನ್‌ ಡಾಲರ್‌ಗೆ ತಲುಪಿಸುವುದಾಗಿ 2021ರಲ್ಲಿ ಬಿಜೆಪಿ ಹೇಳಿತ್ತು. ಆದರೆ ಈಗ 2029ಕ್ಕೆ ರಾಜ್ಯದ ಆರ್ಥಿಕತೆಯು ಒಂದು ಟ್ರಿಲಿಯನ್‌ ಡಾಲರ್‌ ಆಗುತ್ತದೆ ಎಂದು ಹೇಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಕೆಲಸಗಳನ್ನು ನಿರ್ವಹಿಸುವಲ್ಲಿ ವಿಫಲರಾದವರು, ಲಕ್ಷ್ಯದ ಸಮಯ ಮಿತಿಯನ್ನು ಬದಲಾಯಿಸುತ್ತಾರೆ. ದೇಶ ಮತ್ತು ರಾಜ್ಯದ ಭವಿಷ್ಯವನ್ನಲ್ಲ. ಸುಳ್ಳುಗಳು ಬಿಜೆಪಿಗೆ ಸಮಾನಾರ್ಥಕ ಪದಗಳಾಗಿವೆ ಎಂದು ಅಖಿಲೇಶ್‌ ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯಂತೆ ರಾಜ್ಯವು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.