ADVERTISEMENT

ಉತ್ತರ ಪ್ರದೇಶ: ದಲಿತ ಯುವತಿ ಮೇಲೆ ಅತ್ಯಾಚಾರ; ಕೊಲೆ

ಪಿಟಿಐ
Published 19 ಜನವರಿ 2021, 8:00 IST
Last Updated 19 ಜನವರಿ 2021, 8:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಹೋಬಾ: ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿರುವ ಆರೋಪದಡಿ ಮೂವರನ್ನು ಮಂಗಳವಾರ ಬಂಧಿಸಲಾಗಿದೆ. ಸಂತ್ರಸ್ಥೆಯ ಮೃತದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದರು.

‘ಶನಿವಾರ ಮಧ್ಯಾಹ್ನ ತರಕಾರಿ ತರಲೆಂದು ಮನೆಯಿಂದ ಹೊರಗೆ ಹೋಗಿದ್ದ 18 ವರ್ಷದ ಯುವತಿ ಮನೆಗೆ ವಾಪಾಸ್‌ ಬಂದಿರಲಿಲ್ಲ.ಬಳಿಕ ಆಕೆಯ ಶವ ಬೆಲಾತಾಲ್‌ ಪ್ರದೇಶದದ ಮರವೊಂದರಲ್ಲಿ ನೇಣು ಬಿಗಿದ ‍ಸ್ಥಿತಿಯಲ್ಲಿ ಪತ್ತೆಯಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಈ ಪ್ರಕರಣ ಸಂಬಂಧ ಆರೋಪಿಗಳಾದ ರೋಹಿತ್‌, ಭುಪೇಂದ್ರ ಮತ್ತು ತರುಣನನ್ನು ಬಂಧಿಸಲಾಗಿದೆ. ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ರವೀಂದ್ರ ತಿವಾರಿ ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.