ADVERTISEMENT

ಕುನೊ ರಾಷ್ಟ್ರೀಯ ಉದ್ಯಾನವನ: 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ

ಪಿಟಿಐ
Published 3 ಜನವರಿ 2024, 11:49 IST
Last Updated 3 ಜನವರಿ 2024, 11:49 IST
<div class="paragraphs"><p>‘ಆಶಾ’ ಜನ್ಮ ನೀಡಿದ ಚೀತಾ ಮರಿಗಳು</p></div>

‘ಆಶಾ’ ಜನ್ಮ ನೀಡಿದ ಚೀತಾ ಮರಿಗಳು

   

ಎಕ್ಸ್‌ ಚಿತ್ರ– @byadavbjp

ಭೋಪಾಲ್‌: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿದ್ದ ಚೀತಾ ‘ಆಶಾ’ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‌ ಹೇಳಿದ್ದಾರೆ.‌

ADVERTISEMENT

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಮರಿಗಳ ಫೋಟೊ ಹಂಚಿಕೊಂಡ ಅವರು, ‘ಕುನೊ ರಾಷ್ಟ್ರೀಯ ಉದ್ಯಾನವನವು ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂದು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಮೀಬಿಯಾದ ಚಿರತೆ ಆಶಾಗೆ ಮರಿಗಳು ಜನಿಸಿವೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂಪಿಸಿದ ಚೀತಾ ಯೋಜನೆಗೆ ಸಂದ ಯಶಸ್ಸಾಗಿದೆ. ಈ ಯೋಜನೆಯಲ್ಲಿ ತೊಡಗಿರುವ ಎಲ್ಲಾ ತಜ್ಞರು, ಕುನೊ ವನ್ಯಜೀವಿ ಅಧಿಕಾರಿಗಳು ಮತ್ತು ಭಾರತದಾದ್ಯಂತ ಇರುವ ವನ್ಯಜೀವಿ ಉತ್ಸಾಹಿಗಳಿಗೆ ನನ್ನ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

ಮಾರ್ಚ್ 2023 ರಲ್ಲಿ, ಜ್ವಾಲಾ ಎಂದು ಮರುನಾಮಕರಣಗೊಂಡ ಸಿಯಾಯಾ  ಹೆಸರಿನ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಲ್ಲಿ ಒಂದು ಮಾತ್ರ ಬದುಕುಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.