ADVERTISEMENT

ಕೋತಿಗೆ ಕಲ್ಲು ಹೊಡೆದು ಕೊಂದ ದುಷ್ಟರು: ಉತ್ತರ ಪ್ರದೇಶದಲ್ಲಿ ಮೂವರ ಬಂಧನ

ಪಿಟಿಐ
Published 30 ಜೂನ್ 2022, 3:03 IST
Last Updated 30 ಜೂನ್ 2022, 3:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮೇಥಿ: ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಕಲ್ಲು ಹೊಡೆದು ಕೋತಿಯನ್ನು ಕೊಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂವರನ್ನು ಬಂಧಿಸಲಾಗಿದೆ.

ಸಂಗಮ್, ರಾಧೆ ಮತ್ತು ಸೂರಜ್ ಎಂಬ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ಪಿಪರ್‌ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಧೀರೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

ಈ ಮೂವರು ಯುವಕರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 147, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಸೆಕ್ಷನ್ 223 ಮತ್ತು ಪ್ರಾಣಿಯನ್ನು ಕೊಂದ ಅಥವಾ ಅಂಗವಿಕಲಗೊಳಿಸುವ ಮೂಲಕ ದುಷ್ಕೃತ್ಯ ಎಸಗಿದ್ದಕ್ಕಾಗಿ ಸೆಕ್ಷನ್ 429 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಕೋತಿಯನ್ನು ರಕ್ಷಿಸಲು ಯತ್ನಿಸಿದ ದೇವೇಂದ್ರ ಸಿಂಗ್ ಎಂಬಾತನ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಅಮೇಥಿ ಜಿಲ್ಲೆಯ ಪಿಪರ್‌ಪುರ ಪೊಲೀಸ್ ವೃತ್ತದ ವ್ಯಾಪ್ತಿಯ ದುರ್ಗಾಪುರ ಮಾರುಕಟ್ಟೆಯ ಬಿಯರ್ ಅಂಗಡಿಯ ಬಳಿ ಈ ಘಟನೆ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಮೂವರು ಯುವಕರು ಬಿಯರ್ ಶಾಪ್‌ನಿಂದ ಹೊರಬಂದಾಗ ಕೋತಿ ಗಾಯಗೊಂಡು ಶಾಪ್ ಬಳಿ ರಸ್ತೆಬದಿಯಲ್ಲಿ ಕುಳಿತಿತ್ತು.

ಗಾಯಗೊಂಡಿದ್ದ ಕೋತಿ ಚಲನರಹಿತವಾಗುವವರೆಗೂ ದಾಳಿ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಶವವನ್ನು ವಿಲೇವಾರಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.