ADVERTISEMENT

ಬಿಹಾರ: ಮಾರ್ಟರ್‌ ಶೆಲ್‌ ಸ್ಫೋಟ– ಮೂರು ಸಾವು

ಪಿಟಿಐ
Published 8 ಮಾರ್ಚ್ 2023, 15:41 IST
Last Updated 8 ಮಾರ್ಚ್ 2023, 15:41 IST
.
.   

ಗಯಾ, ಬಿಹಾರ (ಪಿಟಿಐ): ‘ಬಿಹಾರದ ಗಯಾ ಜಿಲ್ಲೆಯ ಫೈರಿಂಗ್‌ ವಲಯದ ಆಚೆ ಬುಧವಾರ ಬೆಳಿಗ್ಗೆ ಆರ್ಮಿ ಮಾರ್ಟರ್‌ ಶೆಲ್‌ ಸ್ಫೋಟಗೊಂಡ ಪರಿಣಾಮ ಮೂವರು ಗ್ರಾಮಸ್ಥರು ಸಾವಿಗೀಡಾಗಿದ್ದಾರೆ’ ಎಂದು ಗಯಾದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಆಶಿಶ್‌ ಭಾರ್ತಿ ಅವರು ತಿಳಿಸಿದ್ದಾರೆ.

‘ಭಾರಾಚಟ್ಟಿ ಠಾಣಾ ವ್ಯಾಪ್ತಿಯ ಗುಲರ್‌ವೇದ್‌ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ’ ಎಂದರು.

‘ಸ್ಫೋಟದಿಂದಾಗಿ ಒಟ್ಟು ಆರು ಮಂದಿ ಗಾಯಗೊಂಡಿದ್ದರು. ಅವರೆಲ್ಲರನ್ನೂ ಗಯಾದ ಅನುರಾಗ ನಾರಾಯಣ ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮಹಿಳೆಯೊಬ್ಬರು ಸೇರಿದಂತೆ ಮೂವರು ಮೃತಪಟ್ಟರು. ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ತನಿಖೆಗಾಗಿ ಪೊಲೀಸರ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ’ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.