ADVERTISEMENT

ಎಲ್‌ಇಟಿಯ ಮೂವರು ಉಗ್ರರ ಸೆರೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 18:31 IST
Last Updated 23 ಮೇ 2022, 18:31 IST
   

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಲಷ್ಕರ್‌–ಎ–ತೈಯಬಾ(ಎಲ್‌ಇಟಿ) ಸಂಘಟನೆಯ ಮೂವರು ಹೈಬ್ರಿಡ್‌ ಉಗ್ರರನ್ನು ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಪಠಣ್‌ನ ಗೋಷ್‌ಬಗ್ ನಿವಾಸಿಗಳಾದ ನೂರ್ ಮೊಹಮ್ಮದ್ ಯಾತೂ, ಮೊಹಮ್ಮದ್ ರಫೀಕ್ ಪರ್ರೆ ಮತ್ತು ಮೊಹಮ್ಮದ್ ಅಕ್ಬರ್ ಪರ್ರೆ ಬಂಧಿತ ಹೈಬ್ರಿಡ್‌ ಉಗ್ರರು.

ಏಪ್ರಿಲ್‌ 15ರಂದು ಪಠಣ್‌ನ ಗೋಷ್‌ಬಾಗ್‌ನ ಸರಪಂಚ ಮನ್ಸೂರ್‌ ಅಹ್ಮದ್‌ ಬಂಗ್ರೂ ಅವರ ಹತ್ಯೆ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಈ ಮೂವರು ಭಾಗಿಯಾಗಿದ್ದು, ಭಯೋತ್ಪಾದನಾ ದಾಳಿ ಸಂಚು ನಡೆಸಿದ್ದರು. ಬಂಧಿತರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.