ಕೊಚ್ಚಿ: ಕೇರಳದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಕಸದ ಹೊಂಡದಲ್ಲಿ ಬಿದ್ದು 3 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ಬಾಲಕನನ್ನು ರಾಜಸ್ಥಾನ ಮೂಲದ ದಂಪತಿಯ ಮಗ ರಿಧಾನ್ ಜಾಜು ಎಂದು ಗುರುತಿಸಲಾಗಿದೆ. ಬಾಲಕ ಕಸದ ಹೊಂಡಕ್ಕೆ ಬಿದ್ದಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಮಾನ ನಿಲ್ದಾಣದ ‘ದೇಶೀಯ ವಿಮಾನಗಳ ಟರ್ಮಿನಲ್’ ಬಳಿ ಇರುವ ಕೆಫೆಯ ಬಳಿ ಘಟನೆ ನಡೆದಿದೆ. ರಿಧಾನ್‌ನ ಪೋಷಕರು ಕೆಫೆಯಲ್ಲಿದ್ದರು. ಈ ವೇಳೆ ಆತ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದಾಗ ಕಸದ ಹೊಂಡಕ್ಕೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಧಾನ್ ಪೋಷಕರೊಂದಿಗೆ ನೆಡುಂಬಶ್ಶೇರಿಗೆ ಬಂದಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.