ADVERTISEMENT

ಈ ವರ್ಷ ಮಧ್ಯಪ್ರದೇಶದಲ್ಲೇ ಅಧಿಕ ಹುಲಿಗಳ ಸಾವು: ಎನ್‌ಟಿಸಿಎ ವರದಿ

ಪಿಟಿಐ
Published 24 ಜುಲೈ 2022, 11:35 IST
Last Updated 24 ಜುಲೈ 2022, 11:35 IST

ಭೋಪಾಲ್‌ (ಪಿಟಿಐ): ‘ಹುಲಿಗಳ ನಾಡು’ ಎಂದೇ ಕರೆಯಲ್ಪಡುವ ಮಧ್ಯಪ್ರದೇಶದಲ್ಲಿ ಈ ವರ್ಷ ಇತರ ರಾಜ್ಯಗಳಿಗಿಂತಲೂ ಅಧಿಕ ಹುಲಿಗಳು ಮೃತಪಟ್ಟಿರುವುದುರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ವರದಿಯಿಂದ ತಿಳಿದುಬಂದಿದೆ.

‘ಈ ವರ್ಷ (ಜುಲೈ 15ರವರೆಗೆ) ದೇಶದಲ್ಲಿ ಒಟ್ಟು 74 ಹುಲಿಗಳು ಸಾವಿಗೀಡಾಗಿವೆ. ಈ ಪೈಕಿ ಮಧ್ಯಪ್ರದೇಶದಲ್ಲೇ 27 ಹುಲಿಗಳು ಮರಣ ಹೊಂದಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ 15 ಮತ್ತು 11, ಅಸ್ಸಾಂನಲ್ಲಿ 5, ಕೇರಳ ಹಾಗೂ ರಾಜಸ್ಥಾನದಲ್ಲಿ ತಲಾ 4, ಉತ್ತರಪ್ರದೇಶದಲ್ಲಿ 3, ಆಂಧ್ರಪ್ರದೇಶದಲ್ಲಿ 2, ಬಿಹಾರ, ಒಡಿಶಾ ಮತ್ತು ಛತ್ತೀಸಗಡದಲ್ಲಿ ತಲಾ ಒಂದು ಹುಲಿಗಳು ಮೃತಪಟ್ಟಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಗಡಿಗಾಗಿ ನಡೆಯುವ ಕಾಳಗ, ವಯಸ್ಸು, ಕಾಯಿಲೆ, ಬೇಟೆಗಾರಿಕೆ, ವಿದ್ಯುತ್‌ಸ್ಪರ್ಶ ಹೀಗೆ ಹಲವು ಕಾರಣಗಳಿಂದಾಗಿ ಹುಲಿಗಳು ಮೃತಪಡುತ್ತಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಮಧ್ಯಪ್ರದೇಶದಲ್ಲಿ ಒಟ್ಟು 526 ಹುಲಿಗಳು ಇರುವುದು 2018ರ ಗಣತಿಯಿಂದ ತಿಳಿದುಬಂದಿತ್ತು. ಈ ವರ್ಷ ಮೃತಪಟ್ಟಿರುವ ಹುಲಿಗಳಲ್ಲಿ 9 ಗಂಡು ಹಾಗೂ 8 ಹೆಣ್ಣು ಸೇರಿವೆ’ ಎಂದೂ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.