ADVERTISEMENT

ಕೋವಿಡ್-19: ಟಿಎಂಸಿ ಶಾಸಕ ತಮೋನಾಶ್ ಘೋಷ್ ನಿಧನ

ಪಿಟಿಐ
Published 24 ಜೂನ್ 2020, 6:27 IST
Last Updated 24 ಜೂನ್ 2020, 6:27 IST
ತಮೋನಾಶ್ ಘೋಷ್ (ಘೋಷ್ ಅವರ ಫೇಸ್‌ಬುಕ್ ಚಿತ್ರ)
ತಮೋನಾಶ್ ಘೋಷ್ (ಘೋಷ್ ಅವರ ಫೇಸ್‌ಬುಕ್ ಚಿತ್ರ)   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಶಾಸಕ ತಮೊನಾಶ್ ಘೋಷ್ (60) ಅವರು ಕೋವಿಡ್‌ನಿಂದ ಬುಧವಾರ ಮೃತಪಟ್ಟಿದ್ದಾರೆ.

ಮೇ ತಿಂಗಳಲ್ಲಿ ಸೋಂಕು ದೃಢಪಟ್ಟಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಘೋಷ್ ಅವರಿಗೆ ತೀವ್ರತರವಾದ ಹೃದಯ ಹಾಗೂ ಮೂತ್ರಪಿಂಡ ಸಮಸ್ಯೆ ಇತ್ತು.

ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ತಾ ವಿಧಾನಸಭಾ ಕ್ಷೇತ್ರವನ್ನು ಅವರು 3 ಬಾರಿ ಪ್ರತಿನಿಧಿಸಿದ್ದರು.

ADVERTISEMENT

ಘೋಷ್ ಸಾವಿಗೆ ಮುಖ್ಯಮಂತ್ರ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಇದು ಅತ್ಯಂತ ದುಃಖದ ಸಂಗತಿ. ಮೂರು ಬಾರಿ ಫಾಲ್ತಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು ಪಕ್ಷದ ಖಜಾಂಚಿಯಾಗಿ 1998ರಿಂದ ಕೆಲಸ ಮಾಡಿದ್ದರು. 35 ವರ್ಷಗಳ ಕಾಲ ನಮ್ಮ ಜೊತೆಗಿದ್ದ ಘೋಷ್ ಇಂದು ನಮ್ಮನ್ನಗಲಿದ್ದಾರೆ. ಜನರು ಹಾಗೂ ಪಕ್ಷಕ್ಕಾಗಿ ಅವರು ದುಡಿದಿದ್ದಾರೆ. ಸಮಾಜ ಸೇವೆಗೂ ಅವರ ಕೊಡುಗೆ ಅಪಾರ’ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

‘ಪತ್ನಿ ಝರ್ನಾ, ಇಬ್ಬರು ಹೆಣ್ಣುಮಕ್ಕಳನ್ನು ಅವರು ಅಗಲಿದ್ದಾರೆ.ಘೋಷ್ ಅವರ ನಿಧನದಿಂದ ನಿರ್ಮಾಣವಾಗಿರುವ ನಿರ್ವಾತವನ್ನು ತುಂಬಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.