ADVERTISEMENT

ಚಿಟ್‌ ಫಂಡ್‌ ಪ್ರಕರಣ: ಟಿಎಂಸಿ ಶಾಸಕರ ಮನೆ ಮೇಲೆ ಸಿಬಿಐ ದಾಳಿ

ಪಿಟಿಐ
Published 4 ಸೆಪ್ಟೆಂಬರ್ 2022, 13:53 IST
Last Updated 4 ಸೆಪ್ಟೆಂಬರ್ 2022, 13:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಚಿಟ್‌ ಫಂಡ್‌ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಭಾನುವಾರ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಶಾಸಕ ಸುಬೋಧ್‌ ಅಧಿಕಾರಿ ಮತ್ತು ಅವರ ಸಹೋದರ ಕಮಲ್‌ ಅಧಿಕಾರಿ ನಿವಾಸ, ಕಚೇರಿ ಸೇರಿದಂತೆ ಪಶ್ಚಿಮ ಬಂಗಾಳದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಸನ್ಮಾರ್ಗ್‌ ಕಲ್ಯಾಣ ಸಂಸ್ಥೆಯ ಚಿಟ್‌ ಫಂಡ್‌ ಪ್ರಕರಣದಲ್ಲಿ ಟಿಎಂಸಿ ನಾಯಕ ರಾಜು ಸಹಾನಿ ಅವರನ್ನು ಸಿಬಿಐ ಬಂಧಿಸಿದ ಎರಡು ದಿನಗಳ ಬಳಿಕ ಈ ದಾಳಿ ನಡೆದಿದೆ. ಸಹಾನಿ ಅವರ ನಿವಾಸದಿಂದ ಸಿಬಿಐ 80 ಲಕ್ಷ ನಗದು, ದೇಶೀ ನಿರ್ಮಿತ ಬಂದೂಕು ಮತ್ತು 2.75 ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದೆ.

‘ಅಧಿಕಾರಿ ಅವರ ನಿವಾಸ, ಅವರ ಸಹೋದರರಿಗೆ ಸೇರಿದ ಪೂರ್ವಜರ ನಿವಾಸ ಸೇರಿ ಉತ್ತರ ಪರಗಣ ಜಿಲ್ಲೆಯ ಕಾಂಚಪರ ಮತ್ತು ಹಾಲಿಸಹರ್‌ನ ನಾಲ್ಕು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಅಧಿಕಾರಿ ಆಪ್ತ ಸಹಾಯಕನ ಮನೆ ಮೇಲೂ ದಾಳಿ ನಡೆಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ದಾಳಿಯನ್ನು ಖಂಡಿಸಿರುವ ಟಿಎಂಸಿ ಸಂಸದ ಸೌಗತಾ ರಾಯ್, ‘ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮಣಿಸಲು ವಿಫಲವಾದ ಬಿಜೆಪಿ ಕೇಂದ್ರೀಯ ತನಿಖಾದಳ ಮೂಲಕ ಪಕ್ಷದ ನಾಯಕರನ್ನು ಬೆದರಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.