ADVERTISEMENT

ಕೋಲ್ಕತ್ತಾ: ಟಿಎಂಸಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದಿಂದ ಸಿಸಿರ್ ಅಧಿಕಾರಿ ವಜಾ

ಪಿಟಿಐ
Published 13 ಜನವರಿ 2021, 10:07 IST
Last Updated 13 ಜನವರಿ 2021, 10:07 IST
ಸಿಸಿರ್ ಅಧಿಕಾರಿ ಚಿತ್ರ: ವಿಕಿಪಿಡಿಯಾ
ಸಿಸಿರ್ ಅಧಿಕಾರಿ ಚಿತ್ರ: ವಿಕಿಪಿಡಿಯಾ   

ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಮಾಜಿ ಶಾಸಕ ಸುವೇಂದು ಅಧಿಕಾರಿ ಅವರು ಬಿಜೆಪಿ ಸೇರಿ ಒಂದು ತಿಂಗಳ ನಂತರ, ಅವರ ತಂದೆ ಸಂಸದ ಸಿಸಿರ್ ಅಧಿಕಾರಿ ಅವರನ್ನು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಸಿಸಿರ್ ಅವರ ಜಾಗಕ್ಕೆ ಅಧಿಕಾರಿ ಕುಟುಂಬದ ಕಟ್ಟಾ ವಿರೋಧಿಯಾದ ಹಿರಿಯ ಟಿಎಂಸಿ ನಾಯಕ ಸಚಿವ ಸೌಮೇನ್‌ ಮಹಾಪಾತ್ರ ಅವರನ್ನು ನಿಯೋಜಿಸಲಾಗಿದೆ. ಸಿಸಿರ್ ಅವರನ್ನು ಪಕ್ಷದ ಜಿಲ್ಲಾ ಘಟಕದ ಪ್ರಮುಖ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಿಸಿರ್ ಅಧಿಕಾರಿ ಅವರನ್ನು ದಿಘಾ-ಶಂಕರ್‌ಪುರ ಅಭಿವೃದ್ಧಿ ಪ್ರಾಧಿಕಾರದ (ಡಿಎಸ್‌ಡಿಎ) ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದ ಒಂದು ದಿನದ ನಂತರ ಪಕ್ಷ ಈ ನಿರ್ಧಾರ ಕೈಗೊಂಡಿದೆ. ಸಿಸಿರ್ ಅವರಿಂದ ತೆರವಾಗಿರುವ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ಮತ್ತೊಬ್ಬ ‘ಅಧಿಕಾರಿ ಕುಟುಂಬ‘ದ ವಿರೋಧಿ, ಟಿಎಂಸಿ ಶಾಸಕ ಅಖಿಲ್ ಗಿರಿ ಅವರನ್ನು ನೇಮಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.