ADVERTISEMENT

ಟಿಎಂಸಿ ಸಂಸದರ ವಾಗ್ವಾದ: ವಿಡಿಯೊ ಬಹಿರಂಗ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 0:18 IST
Last Updated 9 ಏಪ್ರಿಲ್ 2025, 0:18 IST
ಕಲ್ಯಾಣ್‌ ಬ್ಯಾನರ್ಜಿ
ಕಲ್ಯಾಣ್‌ ಬ್ಯಾನರ್ಜಿ   

ನವದೆಹಲಿ: ಟಿಎಂಸಿಯ ಇಬ್ಬರು ಸಂಸದರು ವಾಗ್ವಾದ ನಡೆಸಿರುವ ವಿಡಿಯೊವನ್ನು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರು ಮಂಗಳವಾರ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ತಮ್ಮ ಸಹೋದ್ಯೋಗಿಗಳ ಮೇಲೆ ರೇಗಾಡಿದ ಮತ್ತು ಪಕ್ಷದ ಇತರ ನಾಯಕರು ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಸಹ-ಉಸ್ತುವಾರಿ ಆಗಿರುವ ಮಾಳವೀಯ ಅವರು ಟಿಎಂಸಿ ಸಂಸದರ ಚಾಟ್ ಗ್ರೂಪ್‌ನಿಂದ ತಮಗೆ ಲಭಿಸಿದೆ ಎನ್ನಲಾದ ಕೆಲವು ಸ್ಕ್ರೀನ್‌ಶಾಟ್‌ಗಳನ್ನೂ ಹಂಚಿಕೊಂಡಿದ್ದಾರೆ. 

ADVERTISEMENT

‘ಏ.4 ರಂದು ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲಿ ಇಬ್ಬರು ಸಂಸದರು ಮಾತಿನ ಚಕಮಕಿ ನಡೆಸಿದ್ದಾರೆ. ಪಕ್ಷದ ವತಿಯಿಂದ ಮನವಿ ಸಲ್ಲಿಸಲು ಅವರು ಅಲ್ಲಿಗೆ ತೆರಳಿದ್ದರು’ ಎಂದು ಮಾಳವೀಯ ಅವರು ಬರೆದುಕೊಂಡಿದ್ದಾರೆ.

‘ಎಐಟಿಸಿ ಎಂಪಿ 2024’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂಸದರಾದ ಕಲ್ಯಾಣ್‌ ಬ್ಯಾನರ್ಜಿ ಮತ್ತು ಕೀರ್ತಿ ಆಜಾದ್‌ ಪರಸ್ಪರ ಆರೋಪ– ಪ್ರತ್ಯಾರೋಪ ನಡೆಸಿರುವ ಸ್ಕ್ರೀನ್‌ಶಾಟ್‌ಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಟಿಎಂಸಿ ಸಂಸದರೊಬ್ಬರು, ‘ವಾಗ್ವಾದ ನಡೆದಿರುವುದು ಹೌದು. ಆದರೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ’ ಎಂದರು. ‘ಘಟನೆ ನಡೆದಿರುವ ಬಗ್ಗೆ ನನಗೆ ತಿಳಿದಿಲ್ಲ. ಆದರೆ ವಿಡಿಯೊ ಮತ್ತು ಚಾಟ್‌ಗಳು ಪಕ್ಷದ ಘನತೆಗೆ ಧಕ್ಕೆ ತಂದಿದೆ’ ಎಂದು ಟಿಎಂಸಿ ಮುಖಂಡ ಸೌಗತ ರಾಯ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.