ADVERTISEMENT

ರಾಜ್ಯಸಭೆ ಉಪಚುನಾವಣೆಗೆ ಲೂಯಿಜಿನ್ಹೊ ಫೆಲಿರೊ ಟಿ.ಎಂ.ಸಿ ಅಭ್ಯರ್ಥಿ

ಪಿಟಿಐ
Published 13 ನವೆಂಬರ್ 2021, 8:28 IST
Last Updated 13 ನವೆಂಬರ್ 2021, 8:28 IST
ಲೂಯಿಜಿನ್ಹೊ ಫೆಲಿರೊ
ಲೂಯಿಜಿನ್ಹೊ ಫೆಲಿರೊ   

ಕೋಲ್ಕತ್ತ: ಪಶ್ಚಿಮ ಬಂಗಾಳದಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಅಭ್ಯರ್ಥಿಯಾಗಿ ಪಕ್ಷದ ಉಪಾಧ್ಯಕ್ಷ ಲೂಯಿಜಿನ್ಹೊ ಫೆಲಿರೊ ಅವರನ್ನು ಅಭ್ಯರ್ಥಿಯಾಗಿ ಟಿಎಂಸಿ ಆಯ್ಕೆಮಾಡಿದೆ.

ಗೋವಾದ ಮಾಜಿ ಮುಖ್ಯಮಂತ್ರಿಯಾದ ಫೆಲಿರೊ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ ಪಕ್ಷ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದರು.

‘ಸಂಸತ್ತಿನ ಮೇಲ್ಮನೆಯ ಚುನಾವಣೆಗೆ ಅಭ್ಯರ್ಥಿಯಾಗಿ ಲೂಯಿಜಿನ್ಹೊ ಫೆಲಿರೊ ಅವರನ್ನು ಹೆಸರಿಸಲು ಸಂತೋಷವಾಗುತ್ತದೆ’ ಎಂದು. ಟಿಎಂಸಿ ಟ್ವೀಟ್‌ ಮಾಡಿದೆ. ಉಪಚುನಾವಣೆಯು ನವೆಂಬರ್‌ 29ರಂದು ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.