ADVERTISEMENT

ವರ್ಚುವಲ್‌ ರೂಪದಲ್ಲಿ ಸಂಸದೀಯ ಸಮಿತಿಗಳ ಸಭೆಗೆ ಟಿಎಂಸಿ ಆಗ್ರಹ

ಪಿಟಿಐ
Published 9 ಮೇ 2021, 11:02 IST
Last Updated 9 ಮೇ 2021, 11:02 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಕುರಿತು ಚರ್ಚಿಸಲು ವರ್ಚುವಲ್ ಸ್ವರೂಪದಲ್ಲಿ ಸಂಸದೀಯ ಸಮಿತಿ ಸಭೆಗಳನ್ನು ನಡೆಸಬೇಕು ಎಂದು ಆಗ್ರಹಪಡಿಸಿ ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ತೃಣಮೂಲ ಕಾಂಗ್ರೆಸ್ ಪಕ್ಷವು ಪತ್ರ ಬರೆದಿದೆ.

ಈ ವಿಚಾರ ಕುರಿತು ಟಿಎಂಸಿ ಬರೆಯುತ್ತಿರುವ ಮೂರನೇ ಪತ್ರ ಇದು. ಮೊದಲನೆ ಪತ್ರವನ್ನು 2020ರ ಜುಲೈ ಮತ್ತು ಎರಡನೇ ಪತ್ರವನ್ನು ಆಗಸ್ಟ್ 2020ರಲ್ಲಿ ಬರೆಯಲಾಗಿತ್ತು ಎಂದು ಪಕ್ಷವು ತಿಳಿಸಿದೆ.

‘ದೇಶದಲ್ಲಿ ಪ್ರಸ್ತುತ ನಿತ್ಯ 3 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಸಂಸದೀಯ ಸಮಿತಿಗಳು, ಇಲಾಖಾ ಸಮಿತಿಗಳು ಹಾಗೂ ವಿವಿಧ ಸ್ಥಾಯಿತಿ ಸಮಿತಿಗಳ ಸಭೆಗಳನ್ನು ವರ್ಚುವಲ್‌ ರೂಪದಲ್ಲಿ ನಡೆಸುವುದನ್ನು ಪರಿಶೀಲಿಸಬೇಕು’ ಎಂದು ರಾಜ್ಯಸಭೆ ಸದಸ್ಯ, ಟಿಎಂಸಿ ರಾಷ್ಟ್ರೀಯ ವಕ್ತಾರ ಡೆರೆಕ್ ಒಬ್ರಿಯಾನ್ ಹೇಳಿದರು.

ADVERTISEMENT

‘ಪಕ್ಷವು ರಾಜ್ಯಸಭೆ ಅಧ್ಯಕ್ಷರ ಕಚೇರಿಯಿಂದ ಆಗಸ್ಟ್‌ 27ರಂದು ಪತ್ರವನ್ನು ಸ್ವೀಕರಿಸಿದ್ದು, ಈ ಬೇಡಿಕೆ ಕುರಿತ ವಿಷಯವನ್ನು ಸಂಸತ್ತಿನ ಉಭಯ ಸದನಗಳ ನಿಯಮಗಳ ಸಮಿತಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.