ADVERTISEMENT

ಗೋಡ್ಸೆ ವಿರುದ್ಧ ಸಭೆ: ಕೋರ್ಟ್‌ಗೆ ಮನವಿ

ಪಿಟಿಐ
Published 20 ಮೇ 2019, 16:48 IST
Last Updated 20 ಮೇ 2019, 16:48 IST

ಚೆನ್ನೈ: ನಾಥೂರಾಂ ಗೋಡ್ಸೆ ಒಬ್ಬ ‘ಹಿಂದೂ ಮೂಲಭೂತವಾದಿ’ ಮತ್ತು ಮಹಾತ್ಮ ಗಾಂಧಿಯ ಹತ್ಯೆ ಮಾಡಿದ್ದ ವ್ಯಕ್ತಿ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಆಯೋಜಿಸಲು ಉದ್ದೇಶಿಸಿರುವ ಸಭೆಗೆ ಅನುಮತಿ ನೀಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಇಲ್ಲಿನ ಸಂಸ್ಥೆಯೊಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.

‘ತಂದೈ ಪೆರಿಯಾರ್‌ ದ್ರಾವಿಡ ಕಳಗಂ’ ಎಂಬ ಸಂಘಟನೆಯು ಇದೇ 26ರಂದು ಮೈಲಾಪುರ್‌ನಲ್ಲಿ ಇಂಥ ಸಭೆ ಆಯೋಜಿಸಲು ತೀರ್ಮಾನಿಸಿದೆ. ಈ ಸಂಸ್ಥೆಯ ಪರವಾಗಿ ವಕೀಲ ದೊರೆಸ್ವಾಮಿ ಅವರು ಕೋರ್ಟ್‌ಗೆ ಈ ಮನವಿ ಸಲ್ಲಿಸಿದ್ದಾರೆ.

‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ, ಆತನೇ ಗೋಡ್ಸೆ’ ಎಂದು ನಟ ಕಮಲ್‌ಹಾಸನ್‌ ಅವರು ಚುನಾವಣಾ ಭಾಷಣವೊಂದರಲ್ಲಿ ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು. ಸಭೆ ಆಯೋಜಿಸಲು ಇದೇ ಪ್ರೇರಣೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.