ADVERTISEMENT

ಜಾರ್ಖಂಡ್‌: ಮಾವೋವಾದಿ ಪ್ರಶಾಂತ್‌ ಬೋಸ್‌ ಬಂಧನ

ಪಿಟಿಐ
Published 12 ನವೆಂಬರ್ 2021, 15:35 IST
Last Updated 12 ನವೆಂಬರ್ 2021, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಂಚಿ: ‘ಸಿಪಿಐ (ಮಾವೋವಾದಿ) ಸಂಘಟನೆಯ ಉನ್ನತ ನಾಯಕ ಪ್ರಶಾಂತ್‌ ಬೋಸ್‌ ಆಲಿಯಾಸ್‌ ಕಿಶಾನ್‌ ದಾಸ್‌ ಹಾಗೂ ಆತನ ಪತ್ನಿ ಶೀಲಾ ಮರಾಂದಿಯನ್ನು ಜಾರ್ಖಂಡ್‌ನಲ್ಲಿ ಬಂಧಿಸಲಾಗಿದೆ’ ಎಂದು ವರಿಷ್ಠ ಪೊಲೀಸ್‌ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.

ಪ್ರಶಾಂತ್‌ ಬೋಸ್‌, ಸಿಪಿಐ (ಮಾವೋವಾದಿ) ಸಂಘಟನೆಯ ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದು, ಪ‍ತ್ನಿಶೀಲಾ ಮರಾಂದಿಯು ಅದೇ ಸಂಘಟನೆಗೆ ಸೇರಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧಾರಿಸಿ ಅವರಿಬ್ಬರನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಬೋಸ್‌ಪತ್ತೆಗೆ ಸರ್ಕಾರವು ₹1 ಕೋಟಿ ನಗದು ಪುರಸ್ಕಾರ ಘೋಷಿಸಿತ್ತು. ಮೂಲತಃ ಪಶ್ಚಿಮ ಬಂಗಾಳದ ನಿವಾಸಿಯಾಗಿರುವ ಬೋಸ್‌ ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾವೋವಾದಿ ಚಟುವಟಿಕೆಗಳ ಉಸ್ತುವಾರಿಯಾಗಿದ್ದ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.