ನವದೆಹಲಿ: ಪ್ರವಾಸಿ ಬಸ್‌ಗಳಿಗೆ ಆಲ್ ಇಂಡಿಯಾ ಪರ್ಮಿಟ್ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಉದ್ದೇಶಿಸಿದೆ.
ಈ ಪ್ರಸ್ತಾವದ ಪ್ರಕಾರ, ಬಸ್ ಚಾಲಕ ಅಥವಾ ಮಾಲೀಕರು ವಾರ್ಷಿಕ ಶುಲ್ಕ ಪಾವತಿಸಿದರೆ, ದೇಶದಾದ್ಯಂತ ಬಸ್‌ಗಳನ್ನು ಓಡಿಸಬಹುದಾಗಿದೆ.
ಸದ್ಯ, ಪ್ರವಾಸಿ ಬಸ್‌ಗಳು ಪ್ರತ್ಯೇಕವಾಗಿ ಪರವಾನಗಿ ಶುಲ್ಕವನ್ನು ಪಾವತಿಸಬೇಕಾಗಿದೆ. ಅಂದರೆ, ಅವರು ಪ್ರತಿ ರಾಜ್ಯ ಪ್ರವೇಶಿಸಿದಾಗೊಮ್ಮೆ ಆಯಾ ರಾಜ್ಯದಲ್ಲಿ ಪರವಾನಗಿ ಶುಲ್ಕ ಕಟ್ಟಬೇಕು.
ಹೊಸ ಯೋಜನೆಯಂತೆ, 23ಕ್ಕಿಂತ ಹೆಚ್ಚು ಜನ ಪ್ರಯಾಣಿಸಬಹುದಾದ ಹವಾನಿಯಂತ್ರಿತ ಬಸ್‌ಗಳಿಗೆ ವರ್ಷಕ್ಕೆ ₹3 ಲಕ್ಷ, ಸಾಮಾನ್ಯ ಬಸ್‌ಗಳಿಗೆ ವರ್ಷಕ್ಕೆ ₹2 ಲಕ್ಷ ಶುಲ್ಕ ನಿಗದಿ ಮಾಡಲು ಸಚಿವಾಲಯ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಶೀಘ್ರವೇ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.