ADVERTISEMENT

ವಿಷ ಮದ್ಯ ಸೇವನೆ: ಅಸ್ಸಾಂನಲ್ಲಿ 80 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 11:25 IST
Last Updated 23 ಫೆಬ್ರುವರಿ 2019, 11:25 IST
ಮೃತದೇಹಗಳನ್ನು ಸಾಗಿಸುತ್ತಿರುವ ದೃಶ್ಯ  (ಕೃಪೆ: ಎಎಫ್‍ಪಿ)
ಮೃತದೇಹಗಳನ್ನು ಸಾಗಿಸುತ್ತಿರುವ ದೃಶ್ಯ (ಕೃಪೆ: ಎಎಫ್‍ಪಿ)   

ಜೋರ್ಹಟ್: ಅಸ್ಸಾಂನ ಗೊಲಾಘಾಟ್ ಮತ್ತು ಜೋರ್ಹಟ್ ಜಿಲ್ಲೆಯಲ್ಲಿ ವಿಷ ಮದ್ಯ ಸೇವಿಸಿ 80ಮಂದಿ ಸಾವಿಗೀಡಾಗಿದ್ದು , 40 ಮಂದಿ ಅಸ್ವಸ್ಥರಾಗಿದ್ದಾರೆ.

ಗುರುವಾರ ರಾತ್ರಿ ವಿಷ ಮದ್ಯ ಸೇವಿಸಿ ಮೃತರಾದವರಲ್ಲಿ 25 ಮಂದಿ ಗೋಲಾಘಾಟ್ ಜಿಲ್ಲೆಯಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.ಇದರಲ್ಲಿ 15 ಮಂದಿ ಮಹಿಳೆಯರಿದ್ದಾರೆ.

ಜೋರ್ಹಟ್ ಜಿಲ್ಲೆಯ ತಿತಾಬೋರ್ ನಲ್ಲಿ 8 ಮಂದಿ ಹಾಗೂ ಗೋಲಾಘಾಟ್ ಜಿಲ್ಲೆಯ ಮೇರಪನಿ ಎಂಬಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ADVERTISEMENT

ಈ ದುರಂತದ ಬಗ್ಗೆ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಆದೇಶಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.