ADVERTISEMENT

ಪ್ರವಾಸಿಗರಿಗೆ ಪ್ರೋತ್ಸಾಹಧನ ನೀಡಲು ಕೇಂದ್ರದ ಚಿಂತನೆ

ಕೇಂದ್ರ ಪ್ರವಾಸೋದ್ಯಮ ಸಚಿವರ ಘೋಷಣೆ

ಪಿಟಿಐ
Published 25 ಜನವರಿ 2020, 19:35 IST
Last Updated 25 ಜನವರಿ 2020, 19:35 IST
ಪ್ರವಾಸ
ಪ್ರವಾಸ   

ಭುವನೇಶ್ವರ: ‘ಪ್ರವಾಸಪ್ರೇಮಿಗಳನ್ನು ಉತ್ತೇಜಿಸುವ ಉದ್ದೇಶದಿಂದ, ವರ್ಷದಲ್ಲಿ 15 ತಾಣಗಳಿಗೆ ಭೇಟಿನೀಡುವವರಿಗೆ ಪ್ರೋತ್ಸಾಹಧನ ನೀಡಲುಕೇಂದ್ರ ಸರ್ಕಾರ ನಿರ್ಧರಿಸಿದೆ’ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್ ಅವರು ತಿಳಿಸಿದರು.

‘ಈ ಯೋಜನೆಯನ್ನು ಆರ್ಥಿಕ ಲಾಭ ಎಂದು ಪರಿಗಣಿಸಬಾರದು. ಬದಲಿಗೆ ಇದು ಪ್ರವಾಸಕ್ಕೆ ಉತ್ತೇಜನ ನೀಡುವ ಕ್ರಮವಾಗಿದೆ’ ಎಂದು ಅವರು ಹೇಳಿದರು.

‘ಪ್ರವಾಸ ಮಾಡುವವರು ಸ್ವಂತ ರಾಜ್ಯ ಬಿಟ್ಟು ಹೊರರಾಜ್ಯಗಳಲ್ಲಿನ 15 ತಾಣಗಳಿಗೆ ಭೇಟಿ ನೀಡಿರಬೇಕು. ಈ ಪ್ರವಾಸಗಳ ಚಿತ್ರಗಳನ್ನು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅವರ ಪ್ರವಾಸದ ವೆಚ್ಚಗಳನ್ನು ಭರಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಒಡಿಶಾದ ಕೊನಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರವಾಸೋದ್ಯಮ ಸಮಾವೇಶದ ಎರಡು ದಿನಗಳ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತ
ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.