ADVERTISEMENT

ನಾಂದೇಡ್‌, ಪರ್ಭಣಿಯಲ್ಲಿ ಭೂಕಂಪ

ಪಿಟಿಐ
Published 21 ಮಾರ್ಚ್ 2024, 16:33 IST
Last Updated 21 ಮಾರ್ಚ್ 2024, 16:33 IST
....
....   

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ನಾಂದೇಡ್‌ ಮತ್ತು ಪರ್ಭಣಿ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆ ಭೂಮಿ ಕಂಪಿಸಿದೆ.

ಯಾವುದೇ ಸಾವು–ನೋವು, ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 6 ಗಂಟೆ 9 ನಿಮಿಷ ಮತ್ತು 6 ಗಂಟೆ 19 ನಿಮಿಷದ  ವೇಳೆಗೆ ರಿಕ್ಟರ್‌ ಮಾಪಕದಲ್ಲಿ 4.5 ಮತ್ತು 3.6 ತೀವ್ರತೆಯ ಕಂಪನಗಳು ದಾಖಲಾಗಿವೆ. ಹಿಂಗೋಲಿ ಜಿಲ್ಲೆಯ ಕಳಮ್ನೂರಿ ತಾಲ್ಲೂಕಿನ ಜಾಂಬ್ ಗ್ರಾಮದಲ್ಲಿ ಭೂಕಂಪನದ ಕೇಂದ್ರಬಿಂದು ಇತ್ತು ಎಂದು ನಾಂದೇಡ್ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ನಾಂದೇಡ್‌ನ ನಗರದ ಕೆಲವು ಪ್ರದೇಶಗಳಲ್ಲಿ ಮತ್ತು ಜಿಲ್ಲೆಯ ಅರ್ಧಾಪುರ, ಮುದಖೇಡ್, ನಾಯ್‌ಗಾಂವ್, ದೇಗ್ಲೂರ್ ಮತ್ತು ಬಿಳೋಲಿ ತಾಲ್ಲೂಕುಗಳಲ್ಲೂ ಕಂಪನದ ಅನುಭವವಾಗಿದೆ. ಜನರು ಭಯಭೀತರಾಗುವುದು ಬೇಡ ಎಂದು ಜಿಲ್ಲಾಧಿಕಾರಿ ಅಭಿಜೀತ್ ರಾವುತ್ ಮನವಿ ಮಾಡಿದ್ದಾರೆ.

ADVERTISEMENT

ಮನೆಗಳ ಮೇಲ್ಚಾವಣಿಯಲ್ಲಿ ಸಂಗ್ರಹಿಸಿಟ್ಟಿರುವ ಭಾರದ ವಸ್ತುಗಳನ್ನು ತೆರವುಗೊಳಿಸುವಂತೆ ನಿವಾಸಿಗಳಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.