ಅಗರ್ತಲಾ/ನಾಗ್ಪುರ: ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸಂಭವಿಸಿರುವ ಭೀಕರ ಪ್ರವಾಹದಿಂದಾಗಿ 100 ಹೆಚ್ಚು ಕುಟುಂಬಗಳು ನಿರಾಶ್ರಿತವಾಗಿವೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
‘ಸೋಮವಾರ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಾದ ಬೆಲೋನಿಯಾ ಮತ್ತು ಸಂತೀರ್‌ಬಜಾರ್ ಉಪವಿಭಾಗಗಳು ಪ್ರವಾಹದಲ್ಲಿ ಮುಳುಗಿವೆ. 118 ಕುಟುಂಬಗಳ 289 ಜನರನ್ನು 10 ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ದಕ್ಷಿಣ ತ್ರಿಪುರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಹಮ್ಮದ್ ಸಜಾದ್ ಅವರು ತಿಳಿಸಿದ್ದಾರೆ.
ಮುಹುದಿ ನದಿ ನೀರಿನ ಪ್ರಮಾಣ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು (15.70 ಮೀಟರ್), ಒಡ್ಡಿನ ಎರಡು ಬದಿಯೂ ನೀರು ನುಗ್ಗುತ್ತಿದೆ.
ಮಹಾರಾಷ್ಟ್ರ ಜಿಲ್ಲೆಯ ನಾಗ್ಪುರ ಜಿಲ್ಲೆಯಲ್ಲೂ ಪ್ರವಾಹದ ಆತಂಕವಿದ್ದು, ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.