ಅಗರ್ತಲಾ: ತ್ರಿಪುರಾದ ಕೋವಾಯಿ ಜಿಲ್ಲೆಯಲ್ಲಿ ಟ್ರಕ್ ಚಾಲಕನೊಬ್ಬನನ್ನು ₹14 ಕೋಟಿ ಮೌಲ್ಯದ ಮಾದಕ ದ್ರವ್ಯಗಳೊಂದಿಗೆ ಬಂಧಿಸಲಾಗಿದೆ ಎಂದು ಮಂಗಳವಾರ ಹೇಳಿಕೆ ತಿಳಿಸಿದೆ. ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ ತುಯಿಚಂದ್ರೈಬಾರಿಯಲ್ಲಿ ಟ್ರಕ್ ಅನ್ನು ತಡೆಹಿಡಿಯಲಾಯಿತು ಎಂದು ಅದು ಹೇಳಿದೆ.
‘ವಾಹನವನ್ನು ಕೂಲಂಕಷವಾಗಿ ಶೋಧಿಸಿದಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹14 ಕೋಟಿ ಮೌಲ್ಯ ಹೊಂದಿರುವ 1,40,000 ಯಾಬಾ ಮಾತ್ರೆಗಳು ವಶಕ್ಕೆ ಪಡೆಯಲಾಗಿದೆ. ಟ್ರಕ್‌ನ ಚಾಲಕನನ್ನು ಕೂಡಾ ಬಂಧಿಸಲಾಗಿದೆ’ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.