ADVERTISEMENT

ಅಮೆರಿಕ: ಟ್ರಂಪ್‌ ಆಪ್ತ ಟಾಮ್‌ ಬರಾಕ್‌ ಬಂಧನ

ಯುಎಇ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಿದ ಆರೋಪ

ಏಜೆನ್ಸೀಸ್
Published 21 ಜುಲೈ 2021, 6:13 IST
Last Updated 21 ಜುಲೈ 2021, 6:13 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ಲಾಸ್‌ ಏಂಜಲೀಸ್‌ (ಎಪಿ): ಡೊನಾಲ್ಡ್‌ ಟ್ರಂಪ್‌2017ರಲ್ಲಿ ನೂತನ ಅಧಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಆಯೋಜನೆ ಹೊಣೆ ಹೊತ್ತಿದ್ದ ಸಮಿತಿಯ ಮುಖ್ಯಸ್ಥರಾಗಿದ್ದ ಟಾಮ್‌ ಬರಾಕ್‌ ಅವರು ಯುಎಇ ಏಜೆಂಟರಾಗಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

74 ವರ್ಷದ ಟಾಮ್‌ ಅವರಲ್ಲದೇ, ಅವರ ಕಂಪನಿಯ ಉದ್ಯೋಗಿಯಾಗಿದ್ದ ಮ್ಯಾಥ್ಯೂ ಗ್ರಿಮ್ಸ್‌, ಯುಎಇಯ ಉದ್ಯಮಿ ರಶೀದ್‌ ಅಲ್‌ ಮಲಿಕ್‌ ಅವರ ವಿರುದ್ಧ ಇದೇ ಆರೋಪಗಳಡಿ ಬ್ರೂಕ್‌ಲಿನ್‌ನ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.

ಗ್ರಿಮ್ಸ್‌ ಅವರನ್ನು ಸಹ ಬಂಧಿಸಲಾಗಿದೆ. ಮಲಿಕ್‌ 2018ರಲ್ಲಿ ಅಮೆರಿಕ ತೊರೆದಿದ್ದು, ಸದ್ಯ ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ನೆಲೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸಂಯುಕ್ತ ಅರಬ್‌ ಸಂಸ್ಥಾನಗಳಿಗೆ (ಯುಎಇ) ಅನುಕೂಲವಾಗುವ ರೀತಿಯಲ್ಲಿ ಅಮೆರಿಕದ ನೀತಿಗಳ ನಿರೂಪಣೆ ಮೇಲೆ ಪ್ರಭಾವ ಬೀರಲು ಸಂಚು ರೂಪಿಸಿದ್ದರು ಎಂಬ ಆರೋಪ ಟಾಮ್‌ ವಿರುದ್ಧ ಇದೆ.

ಟ್ರಂಪ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ರಾಜತಾಂತ್ರಿಕ ಹುದ್ದೆಗೇರಲು ಸಹ ಟಾಮ್‌ ಯತ್ನಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.