ADVERTISEMENT

ರೈತರ ಪ್ರತಿಭಟನೆಯನ್ನು ಮತ್ತೊಂದು ‘ಶಾಹೀನ್‌ಬಾಗ್‌’ ಮಾಡುವ ಯತ್ನ: ಮನೋಜ್ ತಿವಾರಿ

ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪ

ಪಿಟಿಐ
Published 3 ಡಿಸೆಂಬರ್ 2020, 9:34 IST
Last Updated 3 ಡಿಸೆಂಬರ್ 2020, 9:34 IST
ಮನೋಜ್ ತಿವಾರಿ
ಮನೋಜ್ ತಿವಾರಿ   

ನವದೆಹಲಿ: ‘ತುಕಡೆ ತುಕಡೆ ಗ್ಯಾಂಗ್‌‘ ಎಂದು ಕರೆಸಿಕೊಳ್ಳುವ ಕೆಲವು ಪ್ರತಿಭಟನಾಕಾರರು ದೆಹಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೂ ಶಾಹೀನ್‌ಭಾಗ್‌ ರೀತಿಯ ಪ್ರತಿಭಟನೆಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ.

‘ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವರು ಖಾಲಿಸ್ತಾನ ಪರವಾಗಿ ಘೋಷಣೆಗಳನ್ನು ಕೂಗುತ್ತಾ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯೋಚಿತ ಪಿತೂರಿ ನಡೆಸುತ್ತಿದ್ದಾರೆ‘ ಎಂದು ತಿವಾರಿ ಆರೋಪಿಸಿದ್ದಾರೆ.

‘ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿದ ಗುಂಪುಗಳು ಮತ್ತು ಕೆಲವು ವ್ಯಕ್ತಿಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ನೆಪದಲ್ಲಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದು ಶಾಹೀನ್‌ಬಾಗ್‌ ಮಾಡಲು ಹೊರಟಿದ್ದಾರೆ ‘ ಎಂದು ತಿವಾರಿ ದೂರಿದ್ದಾರೆ.

ADVERTISEMENT

ದಕ್ಷಿಣ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಕೊರೊನಾ ಸಾಂಕ್ರಾಮಿಕದ ನಡುವೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈ ವರ್ಷದ ಆರಂಭದಲ್ಲಿ ಸರಣಿ ಪ್ರತಿಭಟನೆ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.