ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪಾಕ್ ಪರ ನಿಂತಿರುವ ಟರ್ಕಿಯ ಉತ್ಪನ್ನಗಳನ್ನು ಭಾರತ ಬಹಿಷ್ಕಾರ ಹಾಕುತ್ತಿದೆ. ಇದೀಗ ಬಹಿಷ್ಕಾರದ ವಿರುದ್ಧ ಟರ್ಕಿ ಮೂಲದ ಸೆಲೆಬಿ ಕಂಪನಿಯು ಕೋರ್ಟ್ ಮೆಟ್ಟಿಲೇರಿದೆ.
ಟರ್ಕಿ ಮೂಲದ ಸೆಲೆಬಿ ಕಂಪನಿಯು, ಭಾರತದಲ್ಲಿ ವಿಮಾನಯಾನ ನಿಯಂತ್ರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು
ಟರ್ಕಿ ಮೂಲದ ಕಂಪನಿಗಳನ್ನು ಭಾರತವು ಬಹಿಷ್ಕಾರ ಮಾಡಿದ ನಂತರ, ಯಾವುದೇ ಸರಿಯಾದ ಕಾರಣ ನೀಡದೆ ಭಾರತವು 'ಅಸ್ಪಷ್ಟ' ನಿರ್ಧಾರ ತೆಗೆದುಕೊಂಡಿದೆ. ಆದಷ್ಟು ಬೇಗ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಯಾವುದೇ ಕಾರಣಕೊಡದೇ, ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು 3,791 ಜನರ ಉದ್ಯೋಗ ಹಾಗೂ ಕಂಪನಿಯ ಹೂಡಿಕೆದಾರರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮೊಕದ್ದಮೆಯಲ್ಲಿ ಹೇಳಿಕೊಂಡಿದೆ.
ಕಂಪನಿಯು ಟರ್ಕಿಯಲ್ಲಿ ನೋಂದಣಿಯಾಗಿದ್ದರೂ, ಬಹುಪಾಲು ಹೂಡಿಕೆದಾರರು ಜಾಗತಿಕ ಮಟ್ಟದಲ್ಲಿದ್ದಾರೆ ಎಂದು ಕಂಪನಿಯು ಅಲವತ್ತುಕೊಂಡಿದೆ.
ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ, ಭಾರತ ಸರ್ಕಾರವು ಗುರುವಾರ, ಸೆಲೆಬಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.