ಸಂವಿಧಾನ ಸತ್ಯಾಗ್ರಹ ಯಾತ್ರೆ
ಪಿಟಿಐ ಚಿತ್ರ
ಮುಂಬೈ: ದ್ವೇಷ ರಾಜಕೀಯವನ್ನು ವಿರೋಧಿಸಿ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ನೇತೃತ್ವದ ಸಂವಿಧಾನ ಸತ್ಯಾಗ್ರಹ ಯಾತ್ರೆಯು ಸೋಮವಾರ ಆರಂಭವಾಯಿತು. ನಾಗಪುರದಿಂದ ವಾರ್ಧಾವರೆಗೆ ಸುಮಾರು 91 ಕಿ.ಮೀ. ನಡೆಲಿರುವ ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯ ಎನ್‌ಸಿಪಿ(ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಮತ್ತು ಇತರ ಹಲವು ಸಂಘಟನೆಗಳು ಕೂಡ ಭಾಗವಹಿಸುತ್ತಿವೆ.
1956ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರದ ದೀಕ್ಷಭೂಮಿಯಲ್ಲಿ ಈ ಪಾದಯಾತ್ರೆ ಆರಂಭವಾಯಿತು. ಮಹಾತ್ಮ ಗಾಂಧಿ ಅವರ ನಿವಾಸವಾದ ಸೇವಾಗ್ರಾಮ ಆಶ್ರಮದಲ್ಲಿ ಅಕ್ಟೋಬರ್ 2ರಂದು ಪಾದಯಾತ್ರೆ ಕೊನೆಗೊಳ್ಳಲಿದೆ.
‘ಸಂವಿಧಾನವನ್ನು ಬಲಪಡಿಸಲು ಮತ್ತು ರಕ್ಷಿಸಲು ನಾವು ಸಂವಿಧಾನ ಸತ್ಯಾಗ್ರಹ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ಸಂಘ ಪರಿವಾರ ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಹರಡುವ ದ್ವೇಷದ ವಿರುದ್ಧ ನಾವು ಪ್ರೀತಿಯ ಸಂದೇಶವನ್ನು ಈ ಯಾತ್ರೆಯಲ್ಲಿ ನೀಡಲಿದ್ದೇವೆ. ಈ ದ್ವೇಷವು ದೇಶದ ಒಗ್ಗಟ್ಟಿಗೆ ಮಾರಕವಾಗಿದೆ’ ಎಂದು ತುಷಾರ್ ಗಾಂಧಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.