
ವಿಜಯ್
(ಪಿಟಿಐ ಚಿತ್ರ)
ಮಾಮಲ್ಲಪುರಂ/ಚೆನ್ನೈ: ‘ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ; ಅದೊಂದು ಪ್ರಜಾಪ್ರಭುತ್ವದ ಯುದ್ಧ. ಕಮಾಂಡರ್‌ಗಳಾದ ನೀವುಗಳೇ ಈ ಯುದ್ಧದ ನೇತೃತ್ವ ವಹಿಸುತ್ತೀರಿ’ ಎಂದು ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್ ತಮ್ಮ ಕಾರ್ಯಕರ್ತರಿಗೆ ಹೇಳಿದರು.
‘ಅದು ದುಷ್ಟ ಶಕ್ತಿಯಾಗಲಿ (ಡಿಎಂಕೆ ಉದ್ದೇಶಿ ಹೇಳಿದ್ದು) ಅಥವಾ ಭ್ರಷ್ಟರ ಪಡೆ ಇರಲಿ (ಎಐಎಡಿಎಂಕೆ ಉದ್ದೇಶಿಸಿ ಹೇಳಿದ್ದು) ಈ ಎರಡೂ ಪಡೆಗಳು ತಮಿಳುನಾಡಿನಲ್ಲಿ ಆಡಳಿತ ನಡೆಸಬಾರದು. ಇಂಥ ಪಕ್ಷಗಳನ್ನು ವಿರೋಧಿಸುವ ನಿಜವಾದ ಧೈರ್ಯ ನಮಗೆ ಮಾತ್ರವೇ ಇದೆ’ ಎಂದರು.
ತಾವು ಪಕ್ಷದ ಸ್ಥಾಪಿಸಿದ ಉದ್ದೇಶದ ಕುರಿತು ಮಾತನಾಡಿದರ ವಿಜಯ್, ‘ಈ ನೆಲಕ್ಕೆ ಹಾನಿ ಉಂಟು ಮಾಡುವವರಿಂದ ಈ ನೆಲವನ್ನು ರಕ್ಷಿಸಲು ನಾವು ಇಲ್ಲಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ರಾಜಕಾರಣದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದರು. ತಮ್ಮ ಪಕ್ಷದ ಚಿಹ್ನೆ ‘ಸೀಟಿ’ಅನ್ನು ಊದುವುದರ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.