ADVERTISEMENT

ವಿದೇಶದಿಂದಲೇ ಉಗ್ರ ಚಟುವಟಿಕೆ: ಮುಂಬೈನಲ್ಲಿ ಇಬ್ಬರ ಬಂಧನ

ಪಿಟಿಐ
Published 15 ಡಿಸೆಂಬರ್ 2025, 15:58 IST
Last Updated 15 ಡಿಸೆಂಬರ್ 2025, 15:58 IST
<div class="paragraphs"><p>ಉಗ್ರರು</p></div>

ಉಗ್ರರು

   

ಚಂಡೀಗಢ, ಪಂಜಾಬ್: ‘ವಿದೇಶದಿಂದಲೇ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರು ಪಾತಕಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಸೋ‌ಮವಾರ ತಿಳಿಸಿದ್ದಾರೆ. 

‘ದುಬೈ ಮತ್ತು ಅರ್ಮೇನಿಯಾದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಪಾತಕಿಗಳು, ಪಂಜಾಬ್‌ನಲ್ಲಿ ಉಗ್ರ ಚಟುವಟಿಕೆಗಳನ್ನು ಸಂಘಟಿಸಲು ಯತ್ನಿಸುತ್ತಿದ್ದರು’ ಎಂದು ಅವರು ‘ಎಕ್ಸ್’  ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ಗುರುದಾಸಪುರ ಜಿಲ್ಲೆಯ ಸಾಜನ್ ಮಸೀಹ್ ಮತ್ತು ಅಮೃತಸರದ ಮನೀಶ್ ಬೇಡಿ ಬಂಧಿತರು. ಈ ಇಬ್ಬರೂ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆಯ ಹರ್ವಿಂದರ್ ಸಿಂಗ್ ರಿಂಡಾ ಮತ್ತು ಅಮೆರಿಕದಲ್ಲಿ ಬಂಧಿತನಾಗಿರುವ ಗ್ಯಾಂಗ್‌ಸ್ಟರ್‌ ಹ್ಯಾಪಿ ಪ್ಯಾಸಿಯನ್‌ ಜೊತೆ ನಂಟು ಹೊಂದಿದ್ದರು’ ಎಂದು ತಿಳಿಸಿದ್ದಾರೆ. 

‘ಪಾತಕಿಗಳಿಬ್ಬರೂ ಬಟಾಲಾದ ಡೇರಾ ಬಾಬಾ ನಾನಕ್‌ನಲ್ಲಿ ಕೊಲೆ, ಸುಲಿಗೆಗಳು ಮತ್ತು ಅಮೃತಸರದಲ್ಲಿ ಗ್ರೆನೇಡ್ ದಾಳಿಗಳು ಸೇರಿದಂತೆ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಗುಪ್ತಚರ ಮಾಹಿತಿ ಹಾಗೂ ಕೇಂದ್ರ ಸಂಸ್ಥೆಗಳ ನೆರವಿನಿಂದ ಅಂತರ ರಾಜ್ಯ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಯಿತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.