ADVERTISEMENT

ಮೈಸೂರು ಬಳಿಕ ಬೆಂಗಳೂರಲ್ಲಿ ಡೆಲ್ಟಾ ಪ್ಲಸ್ ಪತ್ತೆ: ಸುಧಾಕರ್

ಪಿಟಿಐ
Published 23 ಜೂನ್ 2021, 17:03 IST
Last Updated 23 ಜೂನ್ 2021, 17:03 IST
Coronavirus economic impact concept imagecovid
Coronavirus economic impact concept imagecovid   

ಬೆಂಗಳೂರು: ಕೋವಿಡ್-19 ರ ಡೆಲ್ಟಾ ಪ್ಲಸ್ ರೂಪಾಂತರದ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬುಧವಾರ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅವುಗಳಲ್ಲದೆ, ತಮಿಳುನಾಡಿನಿಂದ ಇಲ್ಲಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರಕ್ಕೆ (ಎನ್‌ಸಿಬಿಎಸ್) ಕಳುಹಿಸಿದ ಒಂದು ಸ್ಯಾಂಪಲ್ ಕೂಡ ಡೆಲ್ಟಾ ಪ್ಲಸ್ ರೂಪಾಂತರ ಎಂದು ಕಂಡುಬಂದಿದೆ.

‘ಜೂನ್ 23 ರ ಹೊತ್ತಿಗೆ, ಮತ್ತೊಂದು ಕೋವಿಡ್ -19 ಡೆಲ್ಟಾ ಪ್ಲಸ್ ರೂಪಾಂತರವು ಕರ್ನಾಟಕದಲ್ಲಿ ಕಂಡುಬಂದಿದೆ. ನಿನ್ನೆ ಮೈಸೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ ಮತ್ತು ಇಂದು ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಇದು ಕರ್ನಾಟಕದಲ್ಲಿ ಒಟ್ಟು ಎರಡು ಪ್ರಕರಣಗಳನ್ನು ಮಾಡಿದೆ’ ಎಂದು ಸುಧಾಕರ್ ಹೇಳಿದರು .

ADVERTISEMENT

ಬೆಂಗಳೂರಿನಲ್ಲಿ ರೋಗಿಯನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

‘ಮೈಸೂರಿನಲ್ಲಿ, ಒಬ್ಬ ರೋಗಿಯು ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ನಾವು ಪ್ರತ್ಯೇಕಿಸಿದ್ದೇವೆ. ಅವರು ಲಕ್ಷಣರಹಿತರಾಗಿದ್ದಾರೆ. ಅವರಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಇಲ್ಲದಿರುವುದು ಒಳ್ಳೆಯ ಸಂಕೇತವಾಗಿದೆ’ ಎಂದು ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.