ADVERTISEMENT

ಮಧ್ಯಪ್ರದೇಶ: ಕೆಮ್ಮಿನ ಸಿರಪ್‌ ಸೇವಿಸಿದ ಇಬ್ಬರು ಮಕ್ಕಳು ಸಾವು

ಪಿಟಿಐ
Published 5 ಅಕ್ಟೋಬರ್ 2025, 16:13 IST
Last Updated 5 ಅಕ್ಟೋಬರ್ 2025, 16:13 IST
<div class="paragraphs"><p>ಕೆಮ್ಮಿನ ಸಿರಪ್‌</p></div>

ಕೆಮ್ಮಿನ ಸಿರಪ್‌

   

ಪಿಟಿಐ ಚಿತ್ರ

ಬೆತುಲ್, ಮಧ್ಯಪ್ರದೇಶ: ಇಲ್ಲಿನ ಬೆತುಲ್‌ ಜಿಲ್ಲೆಯ ಅಮ್ಲಾ ಬ್ಲಾಕ್‌ನಲ್ಲಿ ಇಬ್ಬರು ಮಕ್ಕಳು ಕೆಮ್ಮಿನ ಸಿರಪ್‌ ‘ಕೋಲ್ಡ್ರಿಫ್‌’ನಿಂದ ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ. 

ADVERTISEMENT

ಪರೀಕ್ಷೆ ವೇಳೆ ಡೈಇಥಿಲೀನ್‌ ಗ್ಲೈಕೋಲ್ (ಡಿಇಜಿ) ಮಕ್ಕಳ ದೇಹದಲ್ಲಿರುವುದು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಜಿಲ್ಲೆಯ ಕಲ್ಮೇಶ್ವರ ಗ್ರಾಮದ ಕಮಲೇಶ್‌ ಅವರ ಮಗ ಕಬೀರ್‌ (4) ಜಮುನ್‌ ಬಿಛುನಾ ಗ್ರಾಮದ ಎರಡೂವರೆ ವರ್ಷದ ಗರ್ಮಿತ್‌ ಸಿಂಗ್‌ ಎಂದು ಗುರುತಿಸಲಾಗಿದೆ ಎಂದು ಆಮ್ಲಾ ಬ್ಲಾಕ್‌ನ ವೈದ್ಯಕೀಯ ಅಧಿಕಾರಿ ಡಾ. ಅಶೋಕ್‌ ನರ್ವಾರೆ ತಿಳಿಸಿದ್ದಾರೆ.

‘ಮಕ್ಕಳ ಸ್ಥಿತಿ ಗಂಭೀರವಾದ ಬಳಿಕ ಛಿಂದ್ವಾರಾ ಜಿಲ್ಲೆ ಸಮೀಪದಲ್ಲಿರುವ ಪರಾಸಿಯಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳು ಸಿರಪ್‌ ಸೇವನೆಯಿಂದಲೇ ಮೃತಪಟ್ಟಿದ್ದಾರೆ ಎಂಬುದು ಖಚಿತಪಟ್ಟಿಲ್ಲ. ಈ ಕುರಿತು ವಿಸ್ತೃತ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಡಾ. ನರ್ವಾರೆ ಹೇಳಿದ್ದಾರೆ.

ಇಬ್ಬರು ಮಕ್ಕಳ ಮಕ್ಕಳ ಮೂತ್ರಪಿಂಡದಲ್ಲಿ ಸಮಸ್ಯೆ, ಕಿಬ್ಬೊಟ್ಟೆಯಲ್ಲಿ ಊತ ಕಾಣಿಸಿಕೊಂಡಿತು. ತಕ್ಷಣವೇ ಆ ಮಕ್ಕಳನ್ನು ಬೆತುಲ್‌ನಿಂದ ಭೋಪಾಲ್‌ಗೆ ಕರೆದೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಆದರೆ, ಮೂತ್ರಪಿಂಡದಲ್ಲಿ ಸಮಸ್ಯೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮುಖ್ಯ ಆರೋಗ್ಯಾಧಿಕಾರಿಗೆ ವರದಿ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.