ADVERTISEMENT

ದೆಹಲಿ: ಸರ್ಕಾರಿ ಶಾಲೆ ಸೀಲಿಂಗ್ ಫ್ಯಾನ್ ಬಿದ್ದು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ

ಪಿಟಿಐ
Published 30 ಆಗಸ್ಟ್ 2022, 13:33 IST
Last Updated 30 ಆಗಸ್ಟ್ 2022, 13:33 IST
ಐಸ್ಟಾಸ್ ಚಿತ್ರ
ಐಸ್ಟಾಸ್ ಚಿತ್ರ   

ನವದೆಹಲಿ: ಸರ್ಕಾರಿ ಶಾಲೆಯ ಸೀಲಿಂಗ್ ಫ್ಯಾನ್ ಬಿದ್ದು ಇಬ್ಬರು ಮಕ್ಕಳ ತಲೆಗೆ ಗಾಯವಾಗಿರುವ ಘಟನೆ ದೆಹಲಿ ಹೊರವಲಯದ ನಂಗ್ಲೋಯ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಛಾವಣಿ ತೇವಗೊಂಡು ತೊಟ್ಟಿಕ್ಕುತಿತ್ತು ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.

‘ಆಗಸ್ಟ್ 27ರಂದು ತರಗತಿ ನಡೆಯುತ್ತಿದ್ದ ಸಂದರ್ಭದಲ್ಲೇ ಫ್ಯಾನ್ ಮಕ್ಕಳ ಮೇಲೆ ಬಿದ್ದಿದೆ. ಛಾವಣಿ ಹಾಳಾಗಿದ್ದರಿಂದ ತೇವಗೊಂಡು ನಮ್ಮ ಮೇಲೆ ನೀರು ಸೋರುತ್ತಿತ್ತು. ಇದೀಗ, ಫ್ಯಾನ್ ಕೆಳಗೆ ಬಿದ್ದಿದೆ’ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಘಟನೆ ಕುರಿತಂತೆ ಈವರೆಗೆ ಶಾಲೆಯ ಆಡಳಿತ ಮಂಡಳಿ ಅಥವಾ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಶನಿವಾರ, ಸೋನಿಯಾ ಆಸ್ಪತ್ರೆಯಿಂದ ಮೆಡಿಕೊ–ಲೇಗಲ್ ಪ್ರಕರಣಗಳನ್ನು(ಎಂಎಲ್‌ಸಿ) ಉಲ್ಲೇಖಿಸಿ ಪೊಲೀಸ್ ಠಾಣೆಗೆ ಕರೆಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ನಸ್ರೀನ್(14), ಅಂಜಲಿ(15) ಎಂದು ಗುರುತಿಸಲಾಗಿದೆ. ಇಬ್ಬರೂ ದೆಹಲಿಯ ಪ್ರೇಮ್‌ ನಗರದ ನಿವಾಸಿಗಳಾಗಿದ್ದಾರೆ.

ಆಸ್ಪತ್ರೆಯ ಮಾಹಿತಿ ಆಧಾರದ ಮೇಲೆ, ಸೆಕ್ಷನ್ 287 (ಆಡಳಿತ ವರ್ಗದ ನಿರ್ಲಕ್ಷ್ಯ ವರ್ತನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ನಂಗ್ಲೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.