ADVERTISEMENT

ಕೊರೊನಾ ವೈರಸ್‌ ಸೋಂಕಿನಿಂದ ಜೀವಕೋಶಗಳನ್ನು ರಕ್ಷಿಸುವ ಎರಡು ಔಷಧಗಳ ಅಭಿವೃದ್ಧಿ

ಪಿಟಿಐ
Published 18 ಆಗಸ್ಟ್ 2020, 10:58 IST
Last Updated 18 ಆಗಸ್ಟ್ 2020, 10:58 IST
ಬ್ರೆಜಿಲ್‌ನ ಲ್ಯಾಬ್‌ವೊಂದರಲ್ಲಿ ಅಧ್ಯಯನದಲ್ಲಿ ತೊಡಗಿರುವ ವೈದ್ಯ ವಿಜ್ಞಾನಿ
ಬ್ರೆಜಿಲ್‌ನ ಲ್ಯಾಬ್‌ವೊಂದರಲ್ಲಿ ಅಧ್ಯಯನದಲ್ಲಿ ತೊಡಗಿರುವ ವೈದ್ಯ ವಿಜ್ಞಾನಿ    

ಬಾಸ್ಟನ್: ಲಭ್ಯವಿರುವ ಎರಡು ಔಷಧಗಳು ಕೋವಿಡ್‌ 19 ಸೋಂಕಿಗೆ ಕಾರಣವಾಗುವ ಸಾರ್ಸ್‌–ಕೋವ್‌–2 ವೈರಸ್‌ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಪ್ರಯೋಗಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ ವ್ಯಾಕೌಲಿನ್‌–1 ಮತ್ತು ಎಪಿಲಿಮೊಡ್ ಎಂಬ ಎರಡು ಔಷಧಗಳುಕೋವಿಡ್‌ 19 ವೈರಸ್ ಸೋಂಕು ಮನುಷ್ಯನ ಜೀವಕೋಶಗಳಿಗೆ ತಗಲುದಂತೆ ತಡೆಯುತ್ತವೆ ಎಂಬುದು ಗೊತ್ತಾಗಿದೆ. ಈ ಅಧ್ಯಯನದ ವರದಿ ಪಿಎನ್‌ಎಎಸ್ ಎಂಬ ಪತ್ರಿಕೆಯಲ್ಲೂ ಪ್ರಕಟವಾಗಿದೆ.

ಕೆಲವು ವರ್ಷಗಳ ಹಿಂದೆ ಪಿಐಕೆಎಫ್‌ವೈವಿಇ ಕಿನೇಸ್‌ ಎಂಬ ಕಿಣ್ವ (ಎನ್‌ಜೈಮ್)‌ ಅನ್ನು ಗುರಿಯಾಗಿಸಿಕೊಂಡು ಈ ಔಷಧಗಳನ್ನು ಅಭಿವೃದ್ದಿಪಡಿಸಲಾಗಿದೆ. ಈ ಅಧ್ಯಯನಕ್ಕೂ ಮುನ್ನ ಕೋವಿಡ್‌ 19 ಸೋಂಕಿನಲ್ಲಿ ಕಿಣ್ವಗಳ ಪಾತ್ರವನ್ನು ಅಧ್ಯಯನ ಮಾಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ADVERTISEMENT

’ಈ ಪ್ರಯೋಗ ಪರಿಣಾಮಕಾರಿ ತಂತ್ರವಾಗಲಿದೆ ಎಂದು ನಮ್ಮ ಸಂಶೋಧನೆಯಿಂದ ದೃಢಪಟ್ಟಿದೆ’ ಎಂದು ಈ ಅಧ್ಯಯನದ ಭಾಗವಾಗಿರುವ ಅಮೆರಿಕದ ಹಾರ್ವರ್ಡ್‌ ವೈದ್ಯಕೀಯ ಶಾಲೆಯಲ್ಲಿ ಪ್ರಾಧ್ಯಾಪಕರಾಗಿರುವತೋಮಸ್ ಕಿರ್ಚೌಸೆನ್ ಹೇಳಿದ್ದಾರೆ.ಕಿರ್ಚೌಸೆನ್ ಅವರು 16 ವರ್ಷಗಳ ಹಿಂದೆ ವ್ಯಾಕ್ಯೂಲಿನ್ -1 ಅನ್ನು ಕಂಡುಹಿಡಿದಿದ್ದಾರೆ. ಎಪಿಲಿಮೋಡ್ ಅನ್ನು ಎಲ್ಎಎಂ ಥೆರಪೂಟಿಕ್ಸ್ ಎಂಬ ಕಂಪನಿಯು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.