ಜೈಪುರ: 2 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಇಬ್ಬರನ್ನು ರಾಜಸ್ಥಾನದ ಅಜ್ಮೀರ್‌ನಲ್ಲಿ ಎಸಿಬಿ ಬುಧವಾರ ಬಂಧಿಸಿದೆ.
ಅಜ್ಮೀರ್ ಮಹಾನಗರ ಪಾಲಿಕೆಯ ಆಡಳಿತ ಮಂಡಳಿಯ ಸದಸ್ಯೆಯ ಪತಿ ಲಂಚ ಸ್ವೀಕರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಡ್ ನಂ. 41ರ ಕೌನ್ಸಿಲರ್ ಅವರ ಪತಿ ರಂಜನ್ ಶರ್ಮಾ ಎಂಬುವವರು ಮಧ್ಯವರ್ತಿ ಕಿಶನ್ ಕಂಡೇಲ್‌ವಾಲ್ ಮತ್ತು ದೇವೇಂದ್ರ ಸಿಂಗ್ ಮೂಲಕ ಕಟ್ಟಡ ನಿರ್ಮಾಣ ಕಾರ್ಯವೊಂದಕ್ಕೆ ಅನುಮತಿ ದೊರಕಿಸಿಕೊಡಲು 50 ಲಕ್ಷ ರೂ. ಲಂಚ ಕೇಳಿದ್ದರು ಎಂಬ ದೂರು ಸ್ವೀಕರಿಸಿದ್ದಾಗಿ ಎಸಿಬಿ ತಿಳಿಸಿದೆ.
ದೂರಿಗೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕಿಶನ್ ಕಂಡೇಲ್‌ವಾಲ್ ಮತ್ತು ದೇವೇಂದ್ರ ಸಿಂಗ್ ಅವರನ್ನು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಕ್ಕಾಗಿ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.