ADVERTISEMENT

ಕಾಶ್ಮೀರ: ಇಬ್ಬರು ಹೈಬ್ರಿಡ್‌ ಭಯೋತ್ಪಾದಕರ ಬಂಧನ

ಪಿಟಿಐ
Published 10 ಜೂನ್ 2022, 15:23 IST
Last Updated 10 ಜೂನ್ 2022, 15:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ನಿಷೇಧಿತ ಉಗ್ರ ಸಂಘಟನೆ ಲಷ್ಕರ್‌–ಎ–ತೈಯಬಾ ಸಂಘಟನೆಯ ನಂಟು ಹೊಂದಿದ್ದ ಇಬ್ಬರು ಹೈಬ್ರಿಡ್‌ ಭಯೋತ್ಪಾದಕರನ್ನು ಬಾರಾಮುಲ್ಲಾ ಜಿಲ್ಲೆಯ ಸಪೊರೆಯ ಗುರ್‌ಸೀರ್‌ ಗ್ರಾಮದಲ್ಲಿ ಭದ್ರತಾ ಪಡೆ, ಪೊಲೀಸ್‌ ಹಾಗೂ ಆರ್ಮಿ ಅಧಿಕಾರಿಗಳು ಗುರುವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್‌ ವಕ್ತಾರ, ‘ಶೋಪಿಯಾನ್ ನಿವಾಸಿ ಫೈಜಾನ್‌ ಅಹ್ಮದ್‌ ಪೌಲ್‌ ಹಾಗೂ ಪುಲ್ವಾಮಾದ ನಿವಾಸಿ ಮುಜಾಮಿಲ್ ರಶೀದ್‌ ಮಿರ್‌ ಬಂಧಿತ ಭಯೋತ್ಪಾದಕರು.ದರ್ಪೊರಾ–ದೆಲಿನಾದಿಂದ ಸೀರ್‌ಗೆ ಹೊರಟಿದ್ದ ಇವರನ್ನು ಭದ್ರತಾ ಪಡೆಯ ಸಿಬ್ಬಂದಿ ತಡೆದಾಗ, ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಇವರನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

‘ಬಂಧಿತರಿಂದ 2 ಪಿಸ್ತೂಲು, 2 ಮ್ಯಾಗಜಿನ್‌ ಮತ್ತು ಐದು ಪಿಸ್ತೂಲು ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಹಾಗೂ ನಾಗರಿಕರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.