ADVERTISEMENT

ಕುಗ್ರಾಮದಲ್ಲಿ ಅಗ್ನಿ ಅವಘಡ: ಬಾಲಕಿ ಸೇರಿ ಇಬ್ಬರು ಸಜೀವ ದಹನ, 143 ಗುಡಿಸಲು ಭಸ್ಮ

ಪಿಟಿಐ
Published 18 ಮಾರ್ಚ್ 2021, 12:12 IST
Last Updated 18 ಮಾರ್ಚ್ 2021, 12:12 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಇಟಾನಗರ: ಅಗ್ನಿ ಅವಘಡದಲ್ಲಿ ಐದು ವರ್ಷದ ಬಾಲಕಿ ಸೇರಿ ಇಬ್ಬರು ಸಜೀವ ದಹನವಾಗಿದ್ದು, 143 ಗುಡಿಸಲುಗಳು ಸುಟ್ಟು ಬೂದಿಯಾಗಿರುವ ಘಟನೆ ಅರುಣಾಚಲ ಪ್ರದೇಶದ ಟಿರಾಪ್ ಜಿಲ್ಲೆಯ ಹಳ್ಳಿಯಲ್ಲಿ ಗುರುವಾರ ನಡೆದಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಲಾಂಗ್ಲಿಯಾಂಗ್ ಗ್ರಾಮದಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ನಗರದಿಂದ ದೂರವಿರುವ ಕುಗ್ರಾಮವಾಗಿರುವುದರಿಂದ ಯಾವುದೇ ಅಗ್ನಿಶಾಮಕ ದಳ ಸಹಾಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಟಿರಾಪ್ ಜಿಲ್ಲಾಧಿಕಾರಿ ಟಾರೊ ಮಿಜೆ ತಿಳಿಸಿದ್ದಾರೆ.

ಬೆಂಕಿಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

ADVERTISEMENT

"ವಯಸ್ಸಾದ ಹಾಸಿಗೆ ಹಿಡಿದಿದ್ದ ವ್ಯಕ್ತಿ, ಓರ್ವ ಬಾಲಕಿ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.