ADVERTISEMENT

ಕೊಚ್ಚಿ: ಅಕ್ರಮವಾಗಿ ನೆಲೆಸಿದ್ದ ಮತ್ತಿಬ್ಬರು ಬಾಂಗ್ಲಾದೇಶಿ ಮಹಿಳೆಯರ ಬಂಧನ

ಪಿಟಿಐ
Published 30 ಜನವರಿ 2025, 7:22 IST
Last Updated 30 ಜನವರಿ 2025, 7:22 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಕೊಚ್ಚಿ: ಕೇರಳದ ಎರ್ನಾಕುಲಂ ಬಳಿಯ ಕೊಡನಾಡು ಎಂಬಲ್ಲಿ ಅಕ್ರಮವಾಗಿ ನೆಲೆಸಿದ್ದ ಮತ್ತಿಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೋಬಿಟಿಬಾ (22) ಮತ್ತು ರುಬಿನಾ ಶೇಖ್‌ (19) ಬಂಧಿತರು. ಎರ್ನಾಕುಲಂ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡನಾಡು ಎಂಬಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇವರಿಬ್ಬರು ಪಶ್ಚಿಮ ಬಂಗಾಳದಿಂದ ಗಡಿ ದಾಟಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಏಜೆಂಟ್‌ನ ಸಹಾಯದಿಂದ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎರಡು ವಾರಗಳ ಹಿಂದೆ ಅಕ್ರಮವಾಗಿ ನೆಲೆಸಿದ್ದ 28 ವರ್ಷದ ತಸ್ಲಿಮಾ ಬೇಗಂ ಅವರನ್ನು ಬಂಧಿಸಲಾಗಿತ್ತು. ಬಳಿಕ ಎರ್ನಾಕುಲಂ ಗ್ರಾಮಾಂತರ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ಅವರು ‘ಆಪರೇಷನ್ ಕ್ಲೀನ್’ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ವಿಶೇಷ ಕಾರ್ಯಾಚರಣೆಯಡಿಯಲ್ಲಿ ಇಬ್ಬರನ್ನು ಬಂಧಿಸುವ ಮೂಲಕ ಈ ತಿಂಗಳು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಠಾಣಾ ಪರಿಧಿಯಲ್ಲಿ ಬಂಧಿತ ಬಾಂಗ್ಲಾದೇಶೀಯರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.