ADVERTISEMENT

ಹುರಿಯತ್‌ ಪ್ರತ್ಯೇಕತಾವಾದ | ಹೊರಬಂದ ಮತ್ತೆರಡು ಗುಂಪು: ಅಮಿತ್ ಶಾ

ಪಿಟಿಐ
Published 27 ಮಾರ್ಚ್ 2025, 13:53 IST
Last Updated 27 ಮಾರ್ಚ್ 2025, 13:53 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಜಮ್ಮು–ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್‌ನ ಮತ್ತೆರಡು ಗುಂಪುಗಳು ಪ್ರತ್ಯೇಕತಾವಾದವನ್ನು ತ್ಯಜಿಸಿ, ಪ್ರಧಾನಿ ನರೇಂದ್ರ ಮೋದಿ ನಿರ್ಮಾಣದ ಹೊಸ ಭಾರತದಲ್ಲಿ ನಂಬಿಕೆ ಇರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. 

ಮೋದಿ ಅವರ ಆಡಳಿತದಲ್ಲಿ ಪ್ರತ್ಯೇಕತಾವಾದವು ಕೊನೆಯುಸಿರೆಳೆಯುತ್ತಿವೆ ಮತ್ತು ಕಾಶ್ಮೀರದಾದ್ಯಂತ ಒಗ್ಗಟ್ಟಿಗೆ ಜಯ ಸಿಗುತ್ತಿದೆ ಎಂದು ಶಾ ಹೇಳಿದರು. 

‘ಜಮ್ಮು ಮತ್ತು ಕಾಶ್ಮೀರ ತೆಹ್ರೀಕಿ ಇಸ್ತೆಕ್‌ಲಾಲ್ ಮತ್ತು ಜಮ್ಮು ಮತ್ತು ಕಾಶ್ಮೀರ ತೆಹ್ರೀಕ್–ಇ–ಇಸ್ತಿಕಾಮತ್ ಸಂಘಟನೆಗಳು ಪ್ರತ್ಯೇಕತಾವಾದದಿಂದ ಹೊರಬಂದಿವೆ. ಜೊತೆಗೆ ಮೋದಿ ಅವರ ಹೊಸ ಭಾರತದ ಮೇಲೆ ನಂಬಿಕೆ ಇಟ್ಟಿವೆ’ ಎಂದು ಶಾ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. 

ADVERTISEMENT

‘ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂಮೆಂಟ್’ (ಜೆಕೆಪಿಎಂ) ಮತ್ತು ‘ಜಮ್ಮು ಮತ್ತು ಕಾಶ್ಮೀರ ಡೆಮಾಕ್ರಟಿಕ್ ಪೊಲಿಟಿಕಲ್ ಮೂಮೆಂಟ್’ (ಜೆಕೆಡಿಪಿಎಂ) ಸಂಘಟನೆಗಳು ಪ್ರತ್ಯೇಕತಾವಾದದೊಂದಿಗಿನ ಎಲ್ಲ ಸಂಬಂಧಗಳಿಂದ ಹೊರಬಂದಿರುವುದಾಗಿ ಮಂಗಳವಾರವಷ್ಟೇ ಘೋಷಣೆ ಮಾಡಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.