ADVERTISEMENT

ಹೆಲ್ಮೆಟ್‌ ಇಲ್ಲದ ಪ್ರಯಾಣಿಕರಿಂದ ಪ್ರಬಂಧ ಬರೆಸುವ ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 11:14 IST
Last Updated 17 ಜನವರಿ 2020, 11:14 IST

ಭೋಪಾಲ್(ಮಧ್ಯ ಪ್ರದೇಶ): ಹೆಲ್ಮೆಟ್‌ಇಲ್ಲದಬೈಕ್‌ ಚಲಾಯಿಸಿಪೊಲೀಸರಅತಿಥಿಯಾದಬೈಕ್‌ ಸವಾರರ ಬಳಿ ಹೆಲ್ಮೆಟ್‌ ಬಗ್ಗೆ ಸಣ್ಣ ಪ್ರಬಂಧವನ್ನು ಇಲ್ಲಿನಪೊಲೀಸರುಬರೆಸುತ್ತಿದ್ದಾರೆ.

ತಾನು ಯಾಕೆ ಹೆಲ್ಮೆಟ್‌ಧರಿಸಲಿಲ್ಲಎನ್ನುವ ಬಗ್ಗೆ ಪ್ರಬಂಧಬರೆಯಬೇಕಾಗಿದ್ದುಕಳೆದ ಏಳು ದಿನಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಸುಮಾರು 150ಕ್ಕೂ ಅಧಿಕ ಬೈಕ್‌ ಸವಾರರು ಪ್ರಬಂಧ ಬರೆದಿರುವುದಾಗಿಪೊಲೀಸ್ಅಧಿಕಾರಿ ತಿಳಿಸಿದ್ದಾರೆ.

ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿಅರಿವುಮೂಡಿಸಲಿಕ್ಕಾಗಿಒಂದು ವಾರಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಪ್ರಯುಕ್ತ ಪ್ರಬಂಧ ಬರೆಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದುಪೊಲೀಸ್ಅಧಿಕಾರಿಪ್ರದೀಪ್ಚೌದ್ರಿಅವರು ಹೇಳಿದ್ದಾರೆ.

ADVERTISEMENT

ರಸ್ತೆ ಸುರಕ್ಷತೆಯ ಬಗ್ಗೆ ಸರ್ವಜನಿಕರಲ್ಲಿ ಅರಿವು ಮೂಡಿಸಲುಸಂಚಾರಿ ಪೊಲೀಸರುರ್‍ಯಾಲಿಗಳನ್ನು ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.