ADVERTISEMENT

ಮಹಿಳಾ ದಿನಾಚರಣೆ ಮುನ್ನಾದಿನ ಇಬ್ಬರು ಮಹಿಳಾ ಮಾವೋವಾದಿಗಳು ಶರಣಾಗತಿ

ಏಜೆನ್ಸೀಸ್
Published 8 ಮಾರ್ಚ್ 2019, 2:06 IST
Last Updated 8 ಮಾರ್ಚ್ 2019, 2:06 IST
   

ಕೋರಪುಟ್‌(ಒಡಿಶಾ):ಮಹಿಳಾ ದಿನಾಚರಣೆ ಮುನ್ನಾದಿನ ಗುರುವಾರ ಇಬ್ಬರು ಮಹಿಳಾ ಮಾವೋವಾದಿಗಳು ಒಡಿಶಾ ಪೊಲೀಸರಿಗೆ ಶರಣಾಗಿದ್ದಾರೆ.

ಮಾವೋವಾದಿ ವಿರೋಧಿ ಕಾರ್ಯಾಚರಣೆ ಮತ್ತು ಈ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಕೋರಪುಟ್‌ ಜಿಲ್ಲೆಯಲ್ಲಿ ಡಿಜಿಪಿ ರಾಜೇಂದ್ರ ಪ್ರಸಾದ್‌ ಶರ್ಮಾ ಅವರ ಮುಂದೆ ಹಾಜರಾಗುವ ಮೂಲಕ ಇಬ್ಬರು ಮಹಿಳಾ ಮಾವೋವಾದಿಗಳುಶರಣಾಗಿದ್ದಾರೆ.

ಮಡಿ ಸುಕಾಂತಿ ಮತ್ತು ಕೌಸಲ್ಯಾ ಖಿಲಾ ಶರಣಾದ ಇಬ್ಬರು ಮಹಿಳಾ ಮಾವೋವಾದಿಗಳಾಗಿದ್ದವರು.

ADVERTISEMENT

ಪೊಲೀಸರ ವರದಿ ಪ್ರಕಾರ, ಮಡಿ ಸುಕಾಂತಿ ಒಂದು ಪ್ರದೇಶ ಸಮಿತಿ ಸದಸ್ಯೆ, ಕೌಸಲ್ಯಾ ಖಿಲಾ ಆ ಭಾಗದ ಸದಸ್ಯೆಯಾಗಿದ್ದರು. ಈ ಇಬ್ಬರೂ ಬಂಡುಕೋರರು ಮಾಲ್ಕಂಗಿರಿ ಜಿಲ್ಲೆಯಲ್ಲಿ ನಡೆದ ಹಲವು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಅನ್ವಯ ಇಬ್ಬರಿಗೂ ಪುನರ್ವಸತಿ ಮತ್ತು ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.