ಪಣಜಿ:ಗೋವಾದ ಡಾಬೊಲಿಮ್ ವಿಮಾನ ನಿಲ್ದಾಣದ ರನ್‌ವೇನಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯ (ಐಸಿಜಿ) ಡಾರ್ನಿಯರ್ ವಿಮಾನದ ಟೈರ್ ಸ್ಫೋಟವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ಈ ಅವಘಡ ನಡೆದಿದ್ದು, ಇದರಿಂದ ಹಲವು ವಿಮಾನಗಳ ಕಾರ್ಯಾಚರಣೆಯಲ್ಲಿ ವಿಳಂಬ ಆಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.
ಐಎನ್‌ಎಸ್ ಹನ್ಸಾ ನೌಕಾ ನೆಲೆಯಿಂದ ಕಾರ್ಯಾಚರಿಸುವಕರಾವಳಿ ರಕ್ಷಣಾ ಪಡೆಯು, ದಾಬೊಲಿಮ್ ನಾಗರಿಕ ವಿಮಾನ ನಿಲ್ದಾಣವನ್ನೂ ಬಳಸಿಕೊಳ್ಳುತ್ತದೆ. ‘ನಿಯಮಿತ ಪರೀಕ್ಷೆ ನಡೆಸುತ್ತಿದ್ದಾಗವಿಮಾನದ ಟೈರ್ ಸ್ಫೋಟಗೊಂಡಿದೆ. ರನ್‌ವೇನಿಂದ ವಿಮಾನವನ್ನು ತೆರವು ಮಾಡಲಾಗಿದೆ’ ಎಂದು ಐಸಿಜಿಯ ಡಿಐಸಿಅರುನಾಭ್ ಬೋಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.