ADVERTISEMENT

ಕೋವಿಡ್‌: ಭಾರತದ ವಿಮಾನಗಳಿಗೆ ಕುವೈತ್‌ ನಿರ್ಬಂಧ

ವಿಮಾನಯಾನ ಮಾರ್ಗಸೂಚಿ ನವೀಕರಿಸಿದ ಯುಎಇ

ಪಿಟಿಐ
Published 24 ಏಪ್ರಿಲ್ 2021, 10:47 IST
Last Updated 24 ಏಪ್ರಿಲ್ 2021, 10:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ತನ್ನ ವಿಮಾನಯಾನ ಮಾರ್ಗಸೂಚಿಯನ್ನು ನವೀಕರಿಸಿದ್ದು, ಕುವೈತ್‌ ಸಹ ಭಾರತದ ಎಲ್ಲಾ ವಿಮಾನಗಳನ್ನು ನಿರ್ಬಂಧಿಸಿದೆ.

ಭಾರತದಿಂದ ನೇರವಾಗಿ ಅಥವಾ ಬೇರೆ ದೇಶಗಳ ಮೂಲಕ ಬರುವ ಎಲ್ಲಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ ಎಂದು ಕುವೈತ್‌ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಆದರೆ ಸರಕು ಸಾಗಣೆ ವಿಮಾನಗಳ ಹಾರಾಟ ಮುಂದುವರಿಯಲಿದೆ.

ಯುಎಇ ಮಾಡಿದ ನವೀಕೃತ ಮಾರ್ಗಸೂಚಿಯಂತೆ, ದುಬೈಯಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆದೊಯ್ಯುವ ಕಾರ್ಯ ನಡೆಯಲಿದ್ದು, ಭಾರತದಿಂದ ಪ್ರಯಾಣಿಕರನ್ನು ಕರೆತರುವುದಕ್ಕೆ ಮಾತ್ರ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಸರಕು ಸಾಗಣೆ ವಿಮಾನಗಳು ಎಂದಿನಂತೆ ಸಂಚಾರ ನಡೆಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.