ಮುಂಬೈ: ಕರ್ನಾಟಕದ ಜತೆಗೆ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಗಡಿ ವಿವಾದ ಪರಿಹಾರಕ್ಕಾಗಿ ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಸರ್ಕಾರವು ಶನಿವಾರ ಸಭೆ ನಡೆಸಿದೆ.
ಸುಪ‍್ರೀಂ ಕೋರ್ಟ್‌ನ ಹಿರಿಯ ವಕೀಲ ಹರೀಶ್ ಸಾಳ್ವೆ ಜತೆಗೆ ವಿವಾದದ ವಿಚಾರವನ್ನು ಚರ್ಚಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧರಿಸಿದ್ದಾರೆ. ಸಚಿವರಾದ ಛಗನ್ ಭುಜಬಳ ಮತ್ತು ಏಕನಾಥ ಶಿಂಧೆ ಇರುವ ಇಬ್ಬರ ಸಮಿತಿಯನ್ನು ವಿವಾದ ಪರಿಹಾರ ಪ್ರಯತ್ನದ ಸಮನ್ವಯಕ್ಕಾಗಿ ನೇಮಕ ಮಾಡಲಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯನ್ನು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಉದ್ಧವ್ ನಡೆಸಿದ್ದರು. ಮರಾಠಿ ಮಾತನಾಡುವ ಎಲ್ಲ ಗ್ರಾಮಗಳು ರಾಜ್ಯಕ್ಕೆ ಸೇರುವಂತೆ ಮಾಡಲು ಪಕ್ಷಭೇದ ಮರೆತು ಎಲ್ಲರೂ ಜತೆಯಾಗಿ ಕೆಲಸ ಮಾಡಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.