ADVERTISEMENT

ಶಿವಸೇನಾ ಹೆಸರು–ಚಿಹ್ನೆ ಜಗ್ಗಾಟ: ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ಗೆ ಮೊರೆ

ಚುನಾವಣಾ ಆಯೋಗ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಠಾಕ್ರೆ ಬಣ

ಪಿಟಿಐ
Published 20 ಫೆಬ್ರುವರಿ 2023, 7:51 IST
Last Updated 20 ಫೆಬ್ರುವರಿ 2023, 7:51 IST
ಉದ್ಧವ್ ಠಾಕ್ರೆ (ಕಡತ ಚಿತ್ರ)
ಉದ್ಧವ್ ಠಾಕ್ರೆ (ಕಡತ ಚಿತ್ರ)   

ಮುಂಬೈ: ಶಿವಸೇನಾ ಹೆಸರು ಮತ್ತು ಚಿಹ್ನೆಗಾಗಿ ಕಾದಾಟ ಮುಂದುವರಿದಿದೆ. ಫೆ.17ರಂದು ಚುನಾವಣಾ ಆಯೋಗವು, ಮೂಲ ‘ಶಿವಸೇನಾ‘ ಹೆಸರು ಹಾಗೂ ‘ಬಿಲ್ಲು–ಬಾಣ‘ ಗುರುತು ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಸೇರಿದ್ದು ಎಂಬ ತೀರ್ಪು ಕೊಟ್ಟಿತ್ತು. ಇದರಿಂದ ಉದ್ದವ್ ಠಾಕ್ರೆ ಬಣಕ್ಕೆ ತೀವ್ರ ಮುಖಭಂಗವಾಗಿತ್ತು. ಚುನಾವಣಾ ಆಯೋಗ ಕೊಟ್ಟ ತೀರ್ಪನ್ನು ಪ್ರಶ್ನಿಸಿ ಉದ್ದವ್ ಅವರು ಸುಪ್ರೀಂಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಉದ್ಧವ್‌ ಠಾಕ್ರೆ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಧೀಶ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವನ್ನು ಕೋರಿದ್ದಾರೆ. ಆದರೆ ಅರ್ಜಿಯ ತುರ್ತು ವಿಚಾರಣೆನ್ನು ಪೀಠ ನಿರಾಕರಿಸಿದೆ.

‘ಕಾನೂನು ಎಲ್ಲರಿಗೂ ಸಮಾನ. ಅದು ಎಡ–ಬಲ ಅಥವಾ ಮಧ್ಯಮ ಚಿಂತನೆಗಳನ್ನು ಹೊಂದಿದವರೇ ಆಗಿರಲಿ. ನಾಳೆ ಸರಿಯಾದ ಪ್ರಕ್ರಿಯೆಗಳ ಮೂಲಕ ಅರ್ಜಿಯನ್ನು ತನ್ನಿ‘ ಎಂದು ಚಂದ್ರಚೂಡ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.