ADVERTISEMENT

ಪದವಿ ಪ್ರಮಾಣಪತ್ರಗಳ ಸತ್ಯಾಸತ್ಯತೆ:ಸಕಾಲದಲ್ಲಿ ವರದಿ ನೀಡಲುವಿ.ವಿಗಳಿಗೆ ನಿರ್ದೇಶನ

ಪಿಟಿಐ
Published 26 ಸೆಪ್ಟೆಂಬರ್ 2019, 12:44 IST
Last Updated 26 ಸೆಪ್ಟೆಂಬರ್ 2019, 12:44 IST

ನವದೆಹಲಿ: ‘ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಿಗೆ ಪದವಿ ಪ್ರಮಾಣಪತ್ರಗಳ ಸತ್ಯಾಸತ್ಯತೆ ಕುರಿತು ನಿಖರವಾದ ವರದಿ ಸಲ್ಲಿಸಬೇಕು’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದೆ.

ಉದ್ಯೋಗದ ಉದ್ದೇಶಗಳಿಗಾಗಿ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾದ ಪದವಿ ಪ್ರಮಾಣಪತ್ರದ ಸತ್ಯಾಸತ್ಯತೆ ಕುರಿತು ಸಾಮಾನ್ಯವಾಗಿ ವಿದೇಶಗಳಲ್ಲಿನ ಶಿಕ್ಷಣ ಸಚಿವಾಲಯಗಳು ವರದಿ ಕೇಳುತ್ತವೆ. ಭಾರತೀಯ ವಿಶ್ವವಿದ್ಯಾಲಯಗಳು ನೀಡುವ ವರದಿ ಆಧರಿಸಿ ರಾಯಭಾರಿ ಕಚೇರಿಗಳು ಪದವಿ ಪ್ರಮಾಣಪತ್ರವನ್ನು ದೃಢೀಕರಿಸಿ ಪ್ರಮಾಣಪತ್ರವನ್ನು ನೀಡುತ್ತವೆ.

ಭಾರತದ ಸಾಗರೋತ್ತರ ವ್ಯವಹಾರಗಳ ಕಾರ್ಯದರ್ಶಿ ಈಚೆಗೆ ದುಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಿಂದ ವರದಿ ಬರುವುದು ತಡವಾಗುತ್ತಿದೆ ಎಂಬುದು ಚರ್ಚೆಗೆ ಆಸ್ಪದವಾಗಿತ್ತು. ಈ ಹಿನ್ನೆಲೆಯಲ್ಲಿ ಸಕಾಲದಲ್ಲಿ ರಾಯಭಾರಿ ಕಚೇರಿಗಳು ಬಯಸುವ ಪೂರ್ಣ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಕಳುಹಿಸಬೇಕು ಎಂದು ಯುಜಿಸಿ ನಿರ್ದೇಶನ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.