ADVERTISEMENT

ಅಸ್ಸಾಂ: ಕಠಿಣ ಕ್ರಮದಿಂದ ನಿಗದಿಯಾಗಿದ್ದ ಬಾಲ್ಯ ವಿವಾಹ ರದ್ದು

ಪಿಟಿಐ
Published 17 ಫೆಬ್ರುವರಿ 2023, 12:55 IST
Last Updated 17 ಫೆಬ್ರುವರಿ 2023, 12:55 IST
ಹಿಮಂತ್‌ ಬಿಸ್ವ ಶರ್ಮಾ
ಹಿಮಂತ್‌ ಬಿಸ್ವ ಶರ್ಮಾ   

ಗುವಾಹಟಿ: ‘ಅಸ್ಸಾಂ ಸರ್ಕಾರವು 15 ದಿನಗಳಿಂದ ಬಾಲ್ಯವಿವಾಹದ ವಿರುದ್ಧ ಕೈಗೊಳ್ಳಲಾದ ಕಠಿಣ ಕ್ರಮಗಳು ಸಕಾರಾತ್ಮಕ ಪರಿಣಾಮ ಬೀರಿದ್ದು, ಹಲವಾರು ಕುಟುಂಬಗಳು ಈಗಾಗಲೇ ನಿಗದಿ ಮಾಡಿದ್ದ ಬಾಲ್ಯ ವಿವಾಹಗಳನ್ನು ರದ್ದುಗೊಳಿಸಿವೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶುಕ್ರವಾರ ಹೇಳಿದ್ದಾರೆ.

ಅಸ್ಸಾಂ ಸರ್ಕಾರವು ಬಾಲ್ಯ ವಿವಾಹದ ವಿರುದ್ಧ ಫೆಬ್ರುವರಿ 3ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ಕುರಿತು ಮಂಗಳವಾರದವೆರೆಗೆ 4,225 ಪ್ರಕರಣಗಳನ್ನು ದಾಖಲಿಸಿ 3,031 ಮಂದಿಯನ್ನು ಬಂಧಿಸಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಶರ್ಮಾ, ‘ಈಗಾಗಲೇ ನಿಗದಿ ಮಾಡಲಾಗಿದ್ದ ಬಾಲ್ಯ ವಿವಾಹಗಳನ್ನು ಹಲವರು ರದ್ದುಪಡಿಸಿರುವುದಾಗಿ ಅಸ್ಸಾಂನ ವಿವಿಧೆಡೆಗಳಿಂದ ವರದಿಗಳು ಬಂದಿವೆ. ಇದು ನಿಜವಾಗಿಯೂ 15 ದಿನಗಳ ನಮ್ಮ ಪ್ರಯತ್ನಕ್ಕೆ ಸಂದ ಸಕಾರಾತ್ಮಕ ಫಲ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.