ADVERTISEMENT

ಯುಪಿಎಸ್‌ಸಿ ಈಗ 'ಯೂನಿಯನ್‌ ಪ್ರಚಾರಕ್ ಸಂಘ ಕಮಿಷನ್‌': ರಾಹುಲ್‌ ಟೀಕೆ

ಪಿಟಿಐ
Published 18 ಏಪ್ರಿಲ್ 2022, 11:18 IST
Last Updated 18 ಏಪ್ರಿಲ್ 2022, 11:18 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ಯುಪಿಎಸ್‌ಸಿ ಈಗ ‘ಯೂನಿಯನ್‌ ಪ್ರಚಾರಕ್‌ ಸಂಘ ಕಮಿಷನ್‌’ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧ್ಯಕ್ಷರಾಗಿ ನೇಮಕವಾಗಿರುವ ಮನೋಜ್ ಸೋನಿ ಅವರು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಈ ಟೀಕೆ ಮಾಡಿದ್ದಾರೆ.

ದೇಶದ ಒಂದೊಂದೇ ಸಂಸ್ಥೆಯನ್ನು ‘ನಾಶ’ಪಡಿಸುವ ಮೂಲಕ, ದೇಶದ ಸಂವಿಧಾನವನ್ನು ಹಂತಹಂತವಾಗಿ ನಾಶಪಡಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಈ ಕುರಿತ ಟ್ವೀಟ್‌ ಜೊತೆಗೆ, ಸೋನಿ ನೇಮಕಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.